ಸ್ಕೀಜೋಫ್ರೀನಿಯಾ ಎಂದರೆ ಜನಸಾಮಾನ್ಯರು ಸಹಜವಾಗಿ ಹುಚ್ಚು ಹಿಡಿದಿದೆ, ತಲೆಕೆಟ್ಟವರು ಎಂದು ಗುರುತಿಸುತ್ತಾರೆ. ಅದು ಅಪಾಯಕಾರಿ ಎಂದು ಪರಿಭಾವಿಸಿ ಒಮ್ಮೊಮ್ಮೆ ಹಿಂಸಿಸಲು ಹಿಂದು ಮುಂದು ನೋಡುವುದಿಲ್ಲ. ಮತ್ತದು ಬರಬಾರದ ಕಾಯಿಲೆ ಎಂಬ ಮಿಥ್ಯೆ ಮನದಲ್ಲಿ ಮೂಡುತ್ತದೆ. ಅದೆಲ್ಲ ಮೂಢನಂಬಿಕೆಗಳನ್ನು, ತಪ್ಪು ಕಲ್ಪನೆಗಳನ್ನು ತೊಳೆದು ಹಾಕುವ ಕೆಲಸವನ್ನು ಈ ಕೃತಿ ಮಾಡುತ್ತದೆ. ಸ್ಕಿಜೋಫ್ರೀನಿಯಾ ರೋಗಿಯನ್ನು ಮಾನಸಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿಬಿಡಬೇಕು, ಜೀವನ ಪರ್ಯಂತ ಆಸ್ಪತ್ರೆಯ ನಾಲ್ಕು ಗೋಡೆಗಳ ನಡುವೆ ಅವನು ಬದುಕಬೇಕು, ಇದು ವಂಶವಾಹಿನಿಗಳ ದುಷ್ಪರಿಣಾಮ ಎಂಬ ನಂಬಿಕೆ ಒಂದು ಕಾಲದಲ್ಲಿ ಇತ್ತು. ಆದರೆ ಕಳೆದ ನಾಲ್ಕು ದಶಕಗಳಲ್ಲಿ ಮನೋವೈದ್ಯಕೀಯ ಕ್ಷೇತ್ರದಲ್ಲಿ ಉಂಟಾಗಿರುವ ಪ್ರಗತಿಯಿಂದಾಗಿ, ಸ್ಕಿಜೋಫ್ರೀನಿಯಾ ರೋಗಿಯನ್ನು ಆತನ ಮನೆಯಲ್ಲೇ ಉಳಿಸಿಕೊಂಡು, ಪರಿಣಾಮಕಾರಿ ಚಿಕಿತ್ಸೆ ನೀಡುವ ವಿಧಾನಗಳನ್ನು ಈ ಕೃತಿ ತಿಳಿಸಿ, ಮನದ ಆತಂಕವನ್ನು ದೂರ ಮಾಡುತ್ತದೆ.
©2024 Book Brahma Private Limited.