ಲೇಖಕ ಎಸ್. ವೆಂಕಟೇಶ ಅವರು ಬರೆದ ಕೃತಿ-ಮಿಥ್ಯೆಯ ಬೆನ್ನಟ್ಟಿ. ಅಪಸ್ಮಾರ ರೋಗ ಹಾಗೂ ರೋಗಿಗಳೊಂದಿಗಿನ ತಮ್ಮ ಅನುಭವಗಳನ್ನು ದಾಖಲಿಸಿದ ಕೃತಿ ಇದು. ಸ್ಕಿಜೋಫ್ರೇನಿಯಾ, ಪಾರ್ಕಿನ್ ಸನ್ ಡಿಸೀಸ್, ಖಿನ್ನತೆ- ಇಂತಹ ಮನೋರೋಗಗಳ ಕುರಿತು ಸಮಾಜದಲ್ಲಿರುವ ತಪ್ಪು ತಿಳಿವಳಿಕೆ ಹೋಗಲಾಡಿಸಲು ಲೇಖಕರು ಶ್ರಮಿಸುತ್ತಿರುವುದರ ಭಾಗವಾಗಿ ಈ ಕೃತಿ ರಚನೆಗೊಂಡಿದೆ.
ಅಪಸ್ಮಾರ ರೋಗದ ಮಾಹಿತಿ, ರೋಗಿಗಳ ಅನುಭವ ಹಾಗೂ ಈ ರೋಗ ಮತ್ತು ರೋಗಿಯ ಕುರಿತಾದ ಸಮಾಜದ ಒಟ್ಟು ಗ್ರಹಿಕೆ -ಈ ಎಲ್ಲ ಅಂಶಗಳನ್ನು ಒಳಗೊಂಡಿದ್ದು, ಓದುಗರಿಗೆ ಅಪಸ್ಮಾರ ರೋಗ ಕುರಿತು ವೈಜ್ಞಾನಿಕವಾಗಿ ಉತ್ತಮ ಮಾಹಿತಿ ನೀಡುತ್ತದೆ.
ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ಮಾಜಿ ನಿರ್ದೇಶಕರು ಹಾಗೂ ವಿಶ್ರಾಂತ ಉಪಕುಲಪತಿಗಳಾದ ಡಾ. ಡಿ. ನಾಗರಾಜ ಹಾಗೂ ಡಾ. ಪಿ. ಸತೀಶ ಚಂದ್ರ ಅವರು ಕೃತಿಗೆ ಬೆನ್ನುಡಿ ಬರೆದು ‘ ಅನೇಕ ವೈದ್ಯರು ಸಾಮಾನ್ಯರ ಅಜ್ಞಾನ ಹೋಗಲಾಡಿಸಲು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಆದರೆ, ಅವುಗಳಲ್ಲಿ ಬಹಳಷ್ಟು ಪಠ್ಯಕ್ರಮದ ಕನ್ನಡ ಅನುವಾದಗಳೇ ಆಗಿರುತ್ತವೆ. ಜನರ ಮನಸ್ಸನ್ನು ಮುಟ್ಟಲು ವಿಫಲವಾಗುತ್ತವೆ. ಅವು ವೈಜ್ಞಾನಿಕ ಪ್ರಬಂಧದಿಂದ ಹೊರಬರುವುದೇ ಇಲ್ಲ. ಆದರೆ, ಎಸ್. ವೆಂಕಟೇಶ ಅವರು ಅಪಸ್ಮಾರ ಕುರಿತು ಪುರಾಣ, ಕಲ್ಪನೆ, ನೈಜ ಘಟನೆಗಳ ಮೂಲಕ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಅವರು ಜನಸಾಮಾನ್ಯರನ್ನು ಮುಟ್ಟಲು ಸಮರ್ಥರಾಗಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.