ನಮ್ಮ ಶರೀರದ ಎಲ್ಲ ಚಟುವಟಿಕೆಗಳೂ ಮನಸ್ಸಿನ ಅಧೀನದಲ್ಲಿವೆ ಎನ್ನುತ್ತಾರೆ ಮನಶಾಸ್ತ್ರಜ್ಞರು. ಆದರೆ ಮನಸ್ಸು ಮರ್ಕಟದಂತೆ ಒಂದೆಡೆಯಿಂದ ಮತ್ತೊಂದು ಚಿಂತನೆಗೆ, ಯೋಚನೆಗೆ ಹಾರುತ್ತಿರುತ್ತದೆ. ಅಂತಹ ಚಂಚಲ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಸಾಧನೆಯ ಗುರಿ ತಲುಪುವುದಕ್ಕೆ ಬೇಕಾದ ಮಾನಸಿಕ ಸಿದ್ಧತೆಗಳ ಬಗ್ಗೆ ಲೇಖಕರು ಇಲ್ಲಿ ತಿಳಿಸಿದ್ದಾರೆ.
ಪ್ರೀತಿ, ದುಗುಡ, ವಿಶ್ವಾಸ, ದುಮ್ಮಾನಗಳ ಸಂಗಮ ಮನಸ್ಸನ್ನು ಒಂದೆಡೆ ಕಾರ್ಯದಲ್ಲಿ ಸನ್ನದ್ಧಗೊಳಿಸುವ ಮಾರ್ಗಗಳು ಇಲ್ಲಿವೆ. ಮಾನಸಿಕ ಒತ್ತಡ ಹೆಚ್ಚಾದಲ್ಲಿ ಮಾನಸಿಕ ಕಾಯಿಲೆಗಳು ಮಾತ್ರವಲ್ಲ ದೈಹಿಕ ಕಾಯಿಲೆಗಳು ಉಂಟಾಗುತ್ತವೆ. ಮಾನಸಿಕವಾಗಿ ಸದೃಢವಾಗಿದ್ದಲ್ಲಿ ಎಂತಹ ಕಾಯಿಲೆಯನ್ನೂ ಮೆಟ್ಟಿ ನಿಲ್ಲಬಹುದಾಗಿದೆ ಎಂಬ ಬಗ್ಗೆ ’ಪಾಸಿಟಿವ್ ಮನಸ್ಸು’ ಕೃತಿಯಲ್ಲಿ ಮಾಹಿತಿ ನೀಡಲಾಗಿದೆ.
©2025 Book Brahma Private Limited.