ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಜೀವನ ಕ್ರಮ ಜೀವನ ಮೌಲ್ಯಗಳು. ಜೀವನಕ್ಕೆ ನಿರ್ದಿಷ್ಟ ಕ್ರಮ ಇಲ್ಲದಿದ್ದರೆ ಅದು ಹಾಳಾಗುತ್ತದೆ. ಜೀವನಕ್ಕೆ ಮೌಲ್ಯಗಳು ಸ್ಪರ್ಶ ನೀಡದಿದ್ದರೆ ಅಂದರೆ ಮೌಲ್ಯಾಧಾರಿತ ಬದುಕು ಇರದಿದ್ದರೆ ಅದು ಬದಕೇ ಅಲ್ಲ ಎನ್ನಿಸುವಷ್ಟರ ಮಟ್ಟಿಗೆ ನಿಸ್ಸಾರವಾಗುತ್ತದೆ. ಅದಕ್ಕಾಗಿ ಜೀವನಕ್ಕೆ ನಿರ್ದಿಷ್ಟ ಕ್ರಮದ ಹಾಗೂ ಮೌಲ್ಯಗಳ ಅಗತ್ಯವಿದೆ. ಉತ್ತಮ ಬದುಕಿಗೆ ಈ ಎರಡೂ ಅಂಶಗಳ ಅಳವಡಿಕೆ ಅನಿವಾರ್ಯ. ಈ ಹಿನ್ನೆಲೆಯಲ್ಲಿ, ಲೇಖಕರು ಮನೋವೈಜ್ಞಾನಿಕವಾಗಿ ಚರ್ಚಿಸಿದ ಚಿಂತನೆಗಳು ಈ ಕೃತಿಯಲ್ಲಿವೆ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE