ಗಂಗಾಧರ ಬೆಳ್ಳಾರೆ ಅವರು ಬರೆದ ಕೃತಿ-ನೆನಪಿಗೊಂದು ಕೌನ್ಸೆಲಿಂಗ್. ನೆನಪು ಹಾಗೂ ಮರೆವು -ನೈಜ ಅರ್ಥದಲ್ಲಿ ವರವೇ ಆಗಿವೆ. ಕೆಲವೊಂದು ಸಂಗತಿಗಳನ್ನು ಮರೆಯುವುದರಿಂದ ಲಾಭವುಂಟು ಮತ್ತು ಕೆಲವೊಂದು ಸಂಗತಿಗಳನ್ನು ನೆನಪಿಟ್ಟುಕೊಳ್ಳುವುದರಿಂದ ಹಾನಿಯೂ ಉಂಟು. ಆದ್ದರಿಂದ, ಮನಸ್ಸಿನ ನೆಮ್ಮದಿ ಹಾಳು ಮಾಡುವ ಯಾವುದೇ ನೆನಪುಗಳನ್ನು ನೆನಪಿನಲ್ಲಿರಿಸಿಕೊಳ್ಳಬಾರದು. ಅವುಗಳನ್ನು ಮರೆತು ಬಿಡಬೇಕು ಕೆಲವೊಂದು ನೆನಪುಗಳನ್ನು ಸದಾ ಸ್ಮರಿಸಿಕೊಳ್ಳುತ್ತಲೇ ಇರಬೇಕು. ಎಲ್ಲರಿಗೂ ಈ ರೀತಿ ಮಾಡುವುದು ಸಾಧ್ಯವಾಗದು. ಆದ್ದರಿಂದ, ಅವರಿಗೆ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್) ಅಗತ್ಯ. ಈ ಹಿನ್ನೆಲೆಯಲ್ಲಿ ನೆನಪಿಗೊಂದು ಕೌನ್ಸೆಲಿಂಗ್ ಕೃತಿ ಹೊಸ ಹೊಳವುಗಳನ್ನು ನೀಡುತ್ತದೆ. ಈ ಕೃತಿಗೆ ಅಕಲಂಕ ಪ್ರತಿಷ್ಠಾನದ ‘ಅಕಲಂಕ ಪುಸ್ತಕ ಪುರಸ್ಕಾರ’ (2009) ದೊರೆತಿದೆ.
©2025 Book Brahma Private Limited.