ಸಮಾಜದ ಕೆಲವು ವ್ಯಕ್ತಿಗಳು ಇತರರೊಡನೆ ಬೆರೆಯುವಾಗ, ಮಾತನಾಡುವಾಗ, ವೇದಿಕೆಯಲ್ಲಿ ನಿಂತು ಭಾಷಣ ಮಾಡುವಾಗ, ವ್ಯಕ್ತಿಯಲ್ಲಿ ಮೂಡುವ ಅಧೈರ್ಯ, ಆತಂಕ, ತಲ್ಲಣಗಳು ಕಾಣಸಿಗುತ್ತವೆ. ಅದರಿಂದಾಗಿ ಅನುಭವಿಸುವ ದೈಹಿಕ -ಮಾನಸಿಕ ತೊಂದರೆಗಳು, ಅವುಗಳಿಂದಾಗುವ ದುಷ್ಪರಿಣಾಮ, ಮಾನಸಿಕ ತೊಳಲಾಟದಿಂದ ಹೊರ ಬರುವುದರ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ‘ಗೀಳು’ ರೋಗದ ಬಗ್ಗೆ, ವಿಚಿತ್ರ ಕಾಯಿಲೆಯಾದ ಕೂದಲು ಕಿತ್ತುಕೊಳ್ಳುವ ’ಟ್ರೈಕೊಟೆಲ್ಲೋಮೆನಿಯ” ಮುಂತಾದ ಅನೇಕ ಕಾಯಿಲೆಗಳ ಬಗ್ಗೆ ವಿವರಣೆ ಇಲ್ಲಿದೆ.
©2024 Book Brahma Private Limited.