ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಅವರು ಬಿ.ಇಡಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಚಿಸಿರುವ ಕೃತಿ-ಶೈಕ್ಷಣಿಕ ಮನೋವಿಜ್ಞಾನ. ಮನೋವಿಜ್ಞಾನ, ಪ್ರಜ್ಞಾ ಮನೋವಿಜ್ಞಾನ, ಸಾಮಾನ್ಯ ಮನೋವಿಜ್ಞಾನ, ವರ್ತನಾ ಮನೋವಿಜ್ಞಾನ, ಅಂತರ್ ಅವಲೋಕನ ಪದ್ಧತಿ, ವೀಕ್ಷಣಾತ್ಮಕ ಹಾಗೂ ವಿವರಣಾತ್ಮಕ ವಿಧಾನಗಳು ಕುರಿತು ವಿವರಿಸಿದ್ದಾರೆ. ಬೆಳವಣಿಗೆ, ವಿಕಾಸ, ಅವುಗಳ ವ್ಯತ್ಯಾಸ, ಅರ್ಥ, ನಿರೂಪಣೆ, ದೈಹಿಕ ಭಾವನಾತ್ಮಕ, ನೈತಿಕ, ಜ್ಞಾನಾತ್ಮಕ, ಸಾಮಾಜಿಕ ವಿಕಾಸಗಳು, ತಜ್ಞರ ವ್ಯಾಖ್ಯಾನಗಳು, ಲೇಖಕರು ವಿಷಯ ನಿರೂಪಣೆಗೆ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ವ್ಯಕ್ತಿತ್ವ, ವೈಯಕ್ತಿಕ ಭಿನ್ನತೆ ಗಳ ಬಗ್ಗೆಯೂ ಲೇಖಕರು ವಿಷಯವನ್ನು ಸರಳವಾಗಿ ನಿರೂಪಿಸಿದ್ದು, ವಿದ್ಯಾರ್ಥಿಗಳಿಗೆ ವಿಷಯ ಗ್ರಹಿಕೆ ಸುಲಭವಾಗುವಂತಿದೆ ಎಂದು ಕೃತಿಗೆ ಮುನ್ನುಡಿ ಬರೆದ ಪ್ರೊ. ಎಸ್.ಎಂ. ಸಜ್ಜನರ್ ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.