ಲೇಖಕ ಸಿ. ಆರ್ ಚಂದ್ರಶೇಖರ್ ಅವರ ʼಅಸಮಾಧಾನದಿಂದ ಸಮಾಧಾನದ ಕಡೆಗೆʼ ಕೃತಿಯು ಮನಸ್ಸಿನ ತುಮುಲಗಳನ್ನು ನಿವಾರಿಸಿಕೊಳ್ಳುವ ಅಂಶವನ್ನೊಳಗೊಂಡಿದೆ. ಮನಸ್ಸು ಸಮಾಧಾನದಿಂದ ಇದ್ದರೆ ನಮಗೆ ಆನಂದ ಮತ್ತು ಆರೋಗ್ಯ. ಅಸಮಾಧಾನವಿದ್ದರೆ ಆನಂದವಿಲ್ಲ, ಆರೋಗ್ಯವು ಇರುವುದಿಲ್ಲ. ಮನಸ್ಸಿನಲ್ಲಿ ತುಮುಲಗಳು ಹೆಚ್ಚಾದಾಗ ಭಯ, ದುಃಖ, ಸಿಟ್ಟು ನಮ್ಮನ್ನು ಆವರಿಸಿಕೊಳ್ಳುತ್ತವೆ. ನಮ್ಮ ಶಕ್ತಿ ಸಾಮರ್ಥ್ಯಗಳು ಕಡಿಮೆಯಾಗುತ್ತವೆ. ಆಹಾರ ಸೇವನೆ, ನಿದ್ರೆ, ಮೈಥುನಗಳು ಏರುಪೇರಾಗುತ್ತವೆ. ನಮ್ಮ ರೋಗನಿರೋಧಕ ಶಕ್ತಿ, ಕುಗ್ಗಿ, ರೋಗಾಣುಗಳ ದಾಳಿಗೆ ಶರೀರ ಒಳಗಾಗುತ್ತದೆ. ಅಸಮಾಧಾನಕ್ಕೆ ಕಾರಣಗಳು ಹಲವಾರು ಆಗಿದ್ದು, ಇದರಿಂದ ಗುರಿ ಸಾಧನೆಗಳಿಗೆ ತೊಡಕಾಗುತ್ತದೆ, ಒಂಟಿತನದ ಭಾವನೆ ದಟ್ಟವಾಗಿ ಬೆಳೆದು ಕಾಡುವ ಕಾಯಿಲೆಗೆ ಸೂಕ್ತ ಚಿಕಿತ್ಸೆ ದೊರೆಯುವುದಿಲ್ಲ ಎಂಬ ವಿಚಾರಗಳನ್ನು ಕೃತಿಯಲ್ಲಿ ವಿವರಿಸಲಾಗಿದೆ. ಈ ಅಸಮಾಧಾನದಿಂದ ಹೊರಬರುವುದು ಹೇಗೆ? ಸಮಾಧಾನ ಚಿತ್ತರಾಗುವುದು ಹೇಗೆ? ಎಂಬುದನ್ನು ಅರಿತುಕೊಳ್ಳಲು ಈ ಕೃತಿಯು ಸಹಾಯಕವಾಗುತ್ತದೆ ಎಂಬುದು ಲೇಖಕರ ಅಭಿಪ್ರಾಯವಾಗಿದೆ.
©2024 Book Brahma Private Limited.