ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ವಿದ್ಯಾರ್ಥಿ ಜೀವನದ ಒತ್ತಡಗಳು ಹೇಗೆ ನಿಭಾಯಿಸಬೇಕು?. ಒತ್ತಡರಹಿತ ಬದುಕು ಯಾರದ್ದೂ ಇಲ್ಲ. ದೇಶ-ಕಾಲವನ್ನೂ ಒಳಗೊಂಡಂತೆ ಪ್ರತಿಯೊಬ್ಬರ ಜೀವನದಲ್ಲೂ ಒಂದಿಲ್ಲ ಒಂದು ರೀತಿಯಲ್ಲಿ ಒತ್ತಡಗಳಿರುತ್ತವೆ. ಇವುಗಳ ನಿರ್ವಹಣೆಯೂ ಒಂದು ಕಲೆ. ವಿದ್ಯಾರ್ಥಿ ಜೀವನದಲ್ಲಿಯೂ ಒತ್ತಡಗಳು ಅವರ ಇಡೀ ವ್ಯಕ್ತಿತ್ವವನ್ನೇ , ಆಸಕ್ತಿಗಳನ್ನೇ ತಗ್ಗಿಸಿಬಿಡಬಹುದು. ಆದ್ದರಿಂದ, ಒತ್ತಡ ನಿರ್ವಹಣೆ ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಇದ್ದರೆ ಅವರ ಬದುಕು ಸರಾಗವಾಗಿ, ಸಮಸ್ಯೆಗಳನ್ನು ಎದುರಿಸಲು ಶಕ್ತವಾಗಬಹುದು. ಈ ಹಿನ್ನೆಲೆಯಲ್ಲಿ ಮನೋವೈದ್ಯರಾದ ಲೇಖಕರು ಕೆಲ ಸಲಹೆಗಳನ್ನು ನೀಡಿದ್ದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.