ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಸದಾ ಉತ್ಸಾಹ, ಉಲ್ಲಾಸ ಹೇಗೆ? ಯಾವುದೇ ಸನ್ನಿವೇಶದಲ್ಲಿ ಸಂತಸವಾಗಿರುವುದು ಸಾಮಾನ್ಯ ಮಾತಲ್ಲ. ಅದಕ್ಕಾಗಿ, ವ್ಯಕ್ತಿತ್ವವನ್ನು ಪರಿವರ್ತಿಸಿಕೊಳ್ಳಬೇಕಾಗುತ್ತದೆ. ಸಮಸ್ಯೆಗಳನ್ನು ಸ್ವೀಕರಿಸುವ ಮನೋಭಾವವೂ ಇದಕ್ಕೆ ಕಾರಣವಾಗುತ್ತದೆ. ಆದ್ದರಿಂದ, ನಮ್ಮ ವ್ಯಕ್ತಿತ್ದಕ್ಕೆ ಧಕ್ಕೆಯಾಗದ ಹಾಗೆ ಸಮಸ್ಯೆಗಳಿದ್ದರೂ, ನಗುನಗುತ್ತಲೇ ಅವುಗಳನ್ನು ಸ್ವೀಕರಿಸಿ ಎದುರಿಸುವ ಮನೋಭಾವ ರೂಪಡಿಸಿಕೊಳ್ಳಬೇಕು. ಇಂತಹ ಮನೋವೈಜ್ಞಾನಿಕ ಸಲಹೆಗಳ ಮೂಲಕ ಲೇಖಕರು ‘ಸದಾ ಉತ್ಸಾಹ, ಉಲ್ಲಾಸ ಹೇಗೆ? ಎಂಬುದನ್ನು ವಿವರಿಸಿದ್ದಾರೆ.
©2025 Book Brahma Private Limited.