ಸಮಸ್ಯಾತ್ಮಕ ಮಕ್ಕಳ ಆಪ್ತ ಸಮಾಲೋಚನೆ

Author : ಸಿ.ಆರ್. ಚಂದ್ರಶೇಖರ್

Pages 116

₹ 90.00




Year of Publication: 2018
Published by: ಷಡಕ್ಷರಿಸ್ವಾಮಿ ಡಿಗ್ಗಾಂವಕರ ಪ್ರಕಾಶನ
Address: ಕಲಬುರಗಿ

Synopsys

ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಸಮಸ್ಯಾತ್ಮಕ ಮಕ್ಕಳ ಆಪ್ತ ಸಮಾಲೋಚನೆ.ಸಾಮಾನ್ಯ ಮಕ್ಕಳ ಆಪ್ತ ಸಮಾಲೋಚನೆಗಿಂತ ಸಮಸ್ಯಾತ್ಮಕ ಮಕ್ಕಳ ಆಪ್ತ ಸಮಾಲೋಚನೆ ಭಿನ್ನವಾದದ್ದು. ಏಕೆಂದರೆ, ಮಕ್ಕಳೆ ಸಮಸ್ಯಾತ್ಮಕವಾಗಿರುತ್ತವೆ. ಇಲ್ಲಿ ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸುವುದಕ್ಕಿಂತ ಆ ಮಕ್ಕಳಿಗೆ ಹೇಗೆ ನೋಡಿಕೊಳ್ಳಬೇಕು ಹಾಗೂ ಅವರ ವರ್ತನಾ ಸಮಸ್ಯೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ಅವರ ಪಾಲಕರಿಗೆ ಆಪ್ತ ಸಮಾಲೋಚನೆಯ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಸೂಕ್ಷ್ಮವಾದ ಸಲಹೆಗಳನ್ನು ಮನೋವೈಜ್ಞಾನಿಕವಾಗಿ ನೀಡಿರುವ ವಿಶಿಷ್ಟ ಕೃತಿ ಇದು.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books