ಮಕ್ಕಳನ್ನು ಪಡೆಯುವುದು ಮಾತ್ರ ತಂದೆ-ತಾಯಿಯ ಕೆಲಸವಲ್ಲ; ಅವರನ್ನು ಬೆಳೆಸುವುದು ಒಂದು ಕಲೆ. ತಂದೆ-ತಾಯಿಗೆ ಈ ಕಲೆ ತಿಳಿದಿರದಿದ್ದರೆ ಅವರು ಮಕ್ಕಳನ್ನು ಸರಿಯಾಗಿ ಬೆಳೆಸುವುದಿಲ್ಲ. ಆದ್ದರಿಂದ, ಈ ಹೊಣೆಗಾರಿಕೆ ಕುರಿತು ಲೇಖಕರು ಇಲ್ಲಿ ಕೆಲವು ಸಲಹೆಗಳನ್ನು ಹಾಗೂ ಉತ್ತಮ ಮಾಹಿತಿಗಳನ್ನು ನೀಡಿದ್ದಾರೆ. .
ಲೇಖಕ ಸಂಪಟೂರು ವಿಶ್ವನಾಥ್ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ...
READ MORE