ಮಕ್ಕಳ ಯೋಗಕ್ಷೇಮ

Author : ಸಿ.ಆರ್. ಚಂದ್ರಶೇಖರ್

Pages 140

₹ 90.00




Year of Publication: 2019
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಮಕ್ಕಳ ಯೋಗಕ್ಷೇಮ. ಮಕ್ಕಳ ಲಾಲನೆ-ಪಾಲನೆಯು ಸುಲಭದ ಕೆಲಸವಲ್ಲ. ಅದು ಅತ್ಯಂತ ಕಠಿಣವಾದ ಕೆಲಸ. ಮಕ್ಕಳು ತನಗಾದ ನೋವು-ಹೊಂದಾಣಿಕೆಯ ಸಮಸ್ಯೆಗಳನ್ನು ತನ್ನದೇ ರೀತಿಯಲ್ಲಿ ಹಾವ-ಭಾವಗಳ ಮೂಲಕ ಹೇಳುತ್ತಿರುತ್ತದೆ. ಈ ಹಾವ-ಭಾವಗಳನ್ನು ತಿಳಿಯುವ ಅತ್ಯಂತ ಸೂಕ್ಷ್ಮ ಮನಸ್ಸು ಬೇಕು. ಈ ಬಗ್ಗೆ ಮನೋವೈದ್ಯರಾದ ಲೇಖಕರು ಸಲಹೆ ರೂಪದ ಕ್ರಮಗಳನ್ನು ತಿಳಿಸಿದ್ದು ಈ ಕೃತಿಯ ವೈಶಿಷ್ಟ್ಯ.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books