ಲೇಖಕಿ ಶಾಂತಾ ನಾಗರಾಜ್ ಅವರು ಮಕ್ಕಳ ಪೋಷಕರಿಗಾಗಿ ಬರೆದ ಕೃತಿ-ಶಾಲಾ ಮಕ್ಕಳ ಪೋಷಕರಿಗೆ ಕಿವಿ ಮಾತು. ವ್ಯಕ್ತಿತ್ವ ವಿಕಸನಮಾಲೆಯಡಿ ಈ ಕೃತಿ ಪ್ರಕಟಿಸಿದೆ. ಕೃತಿಯ ಸಂಪಾದಕರು-ಡಾ. ಸಿ.ಆರ್. ಚಂದ್ರಶೇಖರ. ಮಕ್ಕಳನ್ನು ಹೆರುವುದು ಮಾತ್ರವಲ್ಲ; ಪೋಷಕರು ಅವರನ್ನು ಬೆಳೆಸುವ ರೀತಿಯ ಬಗ್ಗೆ ತಿಳಿದಿರಬೇಕು. ಮಕ್ಕಳ ಅಗತ್ಯಗಳನ್ನು ಪೂರೈಸಬೇಕು. ಆಗಲೇ, ತಂದೆ-ತಾಯಿ-ಪೋಷಕರ ಹೊಣೆಗಾರಿಕೆ ನಿರ್ವಹಿಸಿದಂತೆ ಆಗುತ್ತದೆ. ಮಕ್ಕಳ ಮನಸ್ಸನ್ನು ಅರಿಯುವುದು ಮೊದಲ ಹೊಣೆಗಾರಿಕೆ. ಅವರ ಮನಸ್ಸಿನ ಮೇಲೆ ನಮ್ಮತನವನ್ನು ಹೇರಬಾರದು. ಮಾನಸಿಕವಾಗಿ ಮಕ್ಕಳು ಕುಗ್ಗುತ್ತಾರೆ. ತಮ್ಮ ಆಂತರಿಕ ಸಾಮಾರ್ಥ್ಯವನ್ನು ತಿಳಿಯುವಲ್ಲಿ ಕಷ್ಟ-ಭೀತಿ-ಆತಂಕವನ್ನು ಎದುರಿಸುತ್ತವೆ. ಆದ್ದರಿಂದ, ಪೋಷಕರು ಮೊದಲು ಮಕ್ಕಳಿಗೆ ಅವರ ಸಾಮರ್ಥ್ಯ-ದೌರ್ಬಲ್ಯಗಳನ್ನು ತಿಳಿಸಬೇಕು ಇತ್ಯಾದಿ ಅಂಶಗಳು ಸಲಹೆ ರೂಪದಲ್ಲಿ ಒಳಗೊಂಡ ಕೃತಿ ಇದು.
©2024 Book Brahma Private Limited.