ಮನೋವೈದ್ಯ ಕೆ.ಆರ್.ಶ್ರೀಧರ ಅವರ ಕೃತಿ-ವ್ಯಕ್ತಿತ್ವಕ್ಕೆ ಮೆರಗು ಕೊಡುವ ಅನುಭೂತಿ ಸಹಾನುಭೂತಿ. ಮಾತು-ವರ್ತನೆಗಳು, ಸನ್ನಿವೇಶ-ಸಮಸ್ಯೆಗೆ ಪ್ರತಿಕ್ರಿಯೆಗಳು, ಭಾವೋದ್ವೇಗಗಳು, ಗುರಿಮುಟ್ಟಲು ಪಡುವ ಪ್ರಯತ್ನ, ಪ್ರತಿಪಾದಿಸುವ ನೈತಿಕ ಮೌಲ್ಯಗಳು ಎಲ್ಲವೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವವೇ ಆಗಿವೆ. ಇಂತಹ ಗುಣಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ. ನೋವು ನಲಿವುಗಳಿಗೆ ಸ್ಪಂದಿಸಿ, ಅವರು ಮಾಡುವ ತಪ್ಪುಗಳನ್ನು ಕ್ಷಮಿಸಬೇಕೇ, ಶಿಕ್ಷಿಸಬೇಕೇ ಎಂಬುದನ್ನು ನಿರ್ಧರಿಸಬೇಕು. ನಾವು ಅವರೊಡನೆ ಹೊಂದಿಕೊಂಡು ಅವರು ನಮ್ಮೊಂದಿಗೆ ಹೊಂದಿಕೊಳ್ಳಲು ಅವಕಾಶ ನೀಡಬೇಕು. ಅನುಭೂತಿಯಿಂದ ಸಹಾನುಭೂತಿ ಹುಟ್ಟುತ್ತದೆ. ದಯೆ, ಅನುಕಂಪ, ಪ್ರೀತಿ, ವಾತ್ಸಲ್ಯ, ಕ್ಷಮಾಗುಣಗಳು ಹುಟ್ಟುತ್ತವೆ. ಇವುಗಳಿಂದ ವ್ಯಕ್ತಿ-ವ್ಯಕ್ತಿಯ ನಡುವೆ, ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧಗಳು ಸುಧಾರಿಸುತ್ತವೆ. ಗಟ್ಟಿಯಾಗುತ್ತವೆ. ಯಾವುದೇ ಕುಟುಂಬ, ಸಮುದಾಯ, ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ನೆಮ್ಮದಿ, ಸಮಾಧಾನಗಳಿರಬೇಕಾದರೆ ಅನುಭೂತಿ ಬಹಳ ಮುಖ್ಯವಾಗುತ್ತದೆ. ಇಂತಹ ಸಂಗತಿಗಳನ್ನು ಚರ್ಚಿಸಿರುವ ಈ ಕೃತಿ ಮನೋವಿಕಾಸಕ್ಕೂ ನೆರವಾಗುತ್ತದೆ.
©2025 Book Brahma Private Limited.