ಮನೋವೈದ್ಯ ಸಿ.ಆರ್. ಚಂದ್ರಶೇಖರ ಅವರು ಸಂಪಾದಿಸಿದ ಕೃತಿ -ಪರಿಪೂರ್ಣ ವ್ಯಕ್ತಿತ್ವ. ಮನೋವೈದ್ಯ ಡಾ. ಕೆ.ಆರ್. ಶ್ರೀಧರ್ ಹಾಗೂ ಪತ್ನಿ ವಿಜಯಾ ಶ್ರೀಧರ್ , ಲೇಖಕಿ ಡಾ. ಕೆ.ಎಸ್. ಚೈತ್ರ, ಡಾ. ಕೆ.ಎಸ್. ಪವಿತ್ರ ಮತ್ತು ಡಾ. ಕೆ.ಎಸ್. ಶುಭ್ರತ ಅವರು ಪರಿಪೂರ್ಣ ವ್ಯಕ್ತಿತ್ವ ಕುರಿತು ಬರಹಗಳನ್ನು ಸಂಗ್ರಹಿಸಲಾಗಿದೆ. ಪರಿಪೂರ್ಣ ವ್ಯಕ್ತಿತ್ವ ಎಂದರೇನು ? ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳುವುದು ಹೇಗೆ? ಕೆಲವು ಮಾನದಂಡಗಳ ಆಧಾರದ ಮೇಲೆ, ಎಂದರೆ ವ್ಯಕ್ತಿಯ ಗುಣಲಕ್ಷಣಗಳ ಆಧಾರದ ಮೇಲೆ ಆತ ಎಂತಹ ವ್ಯಕ್ತಿ ಎಂಬುದನ್ನು ಗುರುತಿಸಲು ಸಾಧ್ಯವಿದೆ. ಒಬ್ಬ ವ್ಯಕ್ತಿ ಸ್ವಯಂ ಪರಿಪೂರ್ಣ ವ್ಯಕ್ತಿತ್ವ ಗಳಿಸಲು ಸಾಧ್ಯವಾಗಬೇಕಾದರೆ ಆತ ರೂಢಿಸಿಕೊಳ್ಳಬೇಕಾದ ಅಥವಾ ಅನುಸರಿಸಬೇಕಾದ ಉಪಾಯಗಳು ಯಾವುವು ? ಹಲವು ವ್ಯಕ್ತಿಗಳ ಜೀವನದ ಉದಾಹರಣೆಗಳಿಂದ, ವ್ಯಕ್ತಿತ್ವವನ್ನು ವಿವರಿಸುವ ಪ್ರಯತ್ನ ಇಲ್ಲಿದೆ.
©2025 Book Brahma Private Limited.