ಹಿರಿಯ ಮನೋವಿಜ್ಞಾನಿ ಡಾ. ಎಂ. ಬಸವಣ್ಣ ಅವರ ‘ಶೈಕ್ಷಣಿಕ ಮನೋವಿಜ್ಞಾನ’ ಕೃತಿಯು ಪದವಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ರಚಿಸಲಾದ ಪುಸ್ತಕವಾಗಿದೆ. ಈ ಕೃತಿಯನ್ನು ಆಧುನಿಕ ಮನೋವಿಜ್ಞಾನದ ಒಂದು ಪ್ರಮುಖ ವಿಭಾಗ ಎನ್ನಬಹುದು. ಅಮೆರಿಕಾದ ಮನೋವಿಜ್ಞಾನ ಸಂಘ ಹೇಳಿರುವ ಮನೋವಿಜ್ಞಾನದ 54 ವಿಭಾಗಗಳಲ್ಲಿ ಶೈಕ್ಷಣಿಕ ಮನೋವಿಜ್ಞಾನ 15ನೇಯದು. ಪ್ರವೇಶ, ಮಕ್ಕಳ ಮನೋದೈಹಿಕ ಬೆಳವಣಿಗೆ, ಕಲಿಕೆ, ಕಲಿಕೆಯ ಸಿದ್ಧಾಂತಗಳು, ಕಲಿಕೆಯ ನಿರ್ವಹಣೆ ಕಲಿಕೆಗೆ ಸಿದ್ಧತೆ ಮತ್ತು ಪ್ರೇರಣೆ, ಕಲಿಕೆಯ ಉದ್ದೇಶ: ಸ್ಮೃತಿ ಮತ್ತು ವರ್ಗಾವಣೆ, ಆಲೋಚನೆ ಮತ್ತು ಅದರ ಪ್ರಕಾರಗಳು, ಅವಧಾನ, ಆಸಕ್ತಿ ಮತ್ತು ಅಭಿವೃತ್ತಿಗಳು, ಬುದ್ಧಿಶಕ್ತಿಯ ಸ್ವರೂಪ ಮತ್ತು ಅಳತೆ, ಶಿಕ್ಷಣ ಮತ್ತು ಮಾನಸಿಕ ಪರೀಕ್ಷಣಗಳು, ವ್ಯಕ್ತಿತ್ವ, ಸಮಂಜನ ಮತ್ತು ಮನಸ್ವ್ಸಾಸ್ಥ್ಯ, ಶಿಕ್ಷಣ ಮತ್ತು ಶಿಸ್ತು, ಅಸಾಧಾರಣ ಮಕ್ಕಳ ಶಿಕ್ಷಣ, ಶಿಕ್ಷಣ ಮತ್ತು ಸಲಹಾವಿಧಾನ, ವ್ಯಾಸಂಗೇತರ ಕಾರ್ಯಕಲಾಪಗಳು, ಬೋಧನಾ ಸೂತ್ರಗಳು, ಶೈಕ್ಷಣಿಕ ಮನೋವಿಜ್ಞಾನದ ಸಂಶೋಧನಾ ವಿಧಾನಗಳನ್ನು ಒಳಗೊಂಡಿದೆ. ಕಲಿಕೆ ಮನೋವಿಜ್ಞಾನದಲ್ಲಿ ಪ್ರಮುಖವಾದ ಅಧ್ಯಯನ ಮತ್ತು ಸಂಶೋಧನೆಗೆ ಒಳಗಾಗಿರುವ ವಿಷಯ. ಅದನ್ನು ಶಿಕ್ಷಣ ಪ್ರಕ್ರಿಯೆಯಲ್ಲಿ ಅನ್ವಯ ಮಾಡುವುದು ಶೈಕ್ಷಣಿಕ ಮನೋವಿಜ್ಞಾನದ ಆಶಯವಾಗಿದೆ. ಮಾನವರಿಗೆ ಏನನ್ನು ಕಲಿಸಬೇಕು, ಹೇಗೆ ಕಲಿಸಬೇಕು, ಕಲಿತದ್ದನ್ನು ಉಳಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದು ಹೇಗೆ? ಎಂಬುದನ್ನು ವಿವರಿಸುವುದು ಶೈಕ್ಷಣಿಕ ಮನೋವಿಜ್ಞಾನದ ಪ್ರಮುಖ ಉದ್ದೇಶವಾಗಿದೆ ಎಂಬ ಅಂಶಗಳನ್ನು ಒಳಗೊಂಡಿದೆ.
‘ಸಂಕ್ಷಿಪ್ತ ಶೈಕ್ಷಣಿಕ ಮನೋವಿಜ್ಞಾನ’ ಕೃತಿಯ ವಿಮರ್ಶೆ
ನಮ್ಮಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಿವೆ, ಸೆಲೆಬಸ್ ಹೆಚ್ಚಾಗಿವೆ. ಆದರೆ ಇವೆಲ್ಲವಕ್ಕೂ ಪೂರಕವಾದ 'ರೈಕಣಿಕ ಮನೋವಿಜ್ಞಾನ' ಅಥವಾ ಎಜುಕೇಶನಲ್ ಸೈಕಾಲಜಿ ಬಗ್ಗೆ ಕೇಳಿದರೆ ಹೆಚ್ಚಿನವರಿಗೆ ತಿಳಿದಿಲ್ಲ, ಮಕ್ಕಳ ಕಲಿಕೆಯ ಸಾಮರ್ಥ್ಯ, ವಿಭಿನ್ನತೆಗಳ ಬಗೆಗೆ ಅರಿಯದೇ ಕಲಿಕೆಯನ್ನು ಹೇರುವುದು ಮಗುವಿನ ಮೇಲೆ ಎಂಥಾ ಪರಿಣಾಮ ಬೀರಬಹುದು ಅನ್ನೋದರ ಬಗೆಗೂ ನಮಗೆ ಅರಿವಿಲ್ಲ. ಇದೆಲ್ಲವನ್ನೂ ಅರಿಯಬೇಕು, ಮಗುವಿಗೆ ವ್ಯವಸ್ಥಿತ ಕಲಿಕೆ ಸಾಧ್ಯವಾಗಬೇಕು ಎನ್ನುವವರು ಎ೦. ಬಸವಣ್ಣ ಅವರು ಬರೆದಿರುವ ಸಂಕಿಪ್ತ ಶೈಕ್ಷಣಿಕ ಮನೋವಿಜ್ಞಾನ' ಕೃತಿ ಓದಬಹುದು. ಈ ಕೃತಿಯ ಆಯ್ದ ಭಾಗ ಇಲ್ಲಿದೆ.
'ಕಲಿತದ್ದು ಉಪಯೋಗಕ್ಕೆ ಬರಬೇಕಾಡರೆ ಅದು ನೆನಪಿನಲ್ಲಿರಬೇಕು ತಾನೇ ನೆನಪಿನಲ್ಲಿರಬೇಕು ಅಂದರೇನು? ಸಂತರು ಎಲ್ಲ ಉಳಿದಿರುತ್ತದೆ? ಅದನ್ನು ಹೊರತರುವುದು ಹೇಗೆ? ಇವು ಸ್ಮೃತಿಗೆ ಸಂಬಂಧಿಸಿದ ವಿಷಯಗಳು. ಕಲಿತದ್ದು ಎಲ್ಲಿ ಉಳಿದಿರುತ್ತದೆ. ಅದನ್ನು ಹೊರಹಾಕುವುದು ಹೇಗೆ? ಇವು ಸ್ಮೃತಿಗೆ ಸಂಬಂಧಿಸಿದ ವಿಷಯಗಳು, ಕಲಿತದ್ದನ್ನು ಮರೆಯುವುದು ಎಲ್ಲರೂ ತಿಳಿದಿರುವ ನೀಚಾರ, ಆದರೆ ಮರೆವೆ ಎಂದರೇನು? ಏಕೆ ಮರೆಯುತ್ತೇವೆ' ಮರೆಯದಂತೆ ಮಾಡಲು ಸಾಧ್ಯವೇ? ಇವು ವಿಸ್ಮೃತಿಗೆ ಸಂಬಂಧಿಸಿದ ವಿಷಯಗಳು, ಸ್ಮೃತಿ ಹಾಗೂ ವಿಸ್ಮೃತಿ ಮನೋವಿಜ್ಞಾನದಲ್ಲಿ ಹೆಚ್ಚಾಗಿ ಸಂಶೋಧನೆಗೊಳಗಾದ ವಿಷಯಗಳು, ಇವೆರಡಕ್ಕೆ ಸಂಬಂಧಿಸಿ ಪ್ರಶ್ನೆಗಳ ಆಳವಾದ ಪರಿಚಯ ಪ್ರತಿಯೊಬ್ಬ ಅಧ್ಯಾಪಕನಿಗೂ ಅವಶ್ಯಕ.
(ಕೃಪೆ ; ಕನ್ನಡ ಪ್ರಭ, ಭಾನುಪ್ರಭ)
©2024 Book Brahma Private Limited.