ಮನೋವಿಜ್ಞಾನಿ, ಲೇಖಕ ಎಂ. ಬಸವಣ್ಣ ಅವರ ವೈಜ್ಞಾನಿಕ ಕೃತಿ ‘ಕನಸಿನ ಕತೆ’. ಜನರಲ್ಲಿ ಕನಸುಗಳನ್ನು ಕುರಿತಾದ ಆಸಕ್ತಿ ಬಹಳ ಪುರಾತನವಾದುದು. ಸುಮಾರು ಏಳೆಂಟು ಸಾವಿರ ವರ್ಷಗಳಿಂದಲೂ ಜನರು ಕನಸುಗಳನ್ನು ಕುರಿತು ಆಳವಾಗಿ ಆಲೋಚಿಸುತ್ತಿದ್ದಾರೆ. ಆದರೆ, ಕನಸಿನ ವೈಜ್ಞಾನಿಕ ಅಧ್ಯಯನ ಆರಂಭವಾದದ್ದು 1900ರಲ್ಲಿ, ಸಿಗ್ಲಂಡ್ ಫ್ರಾಯ್ ರಚಿಸಿದ ಒಂದು ಗ್ರಂಥದೊಡನೆ.
ಈ ಗ್ರಂಥವನ್ನು ವಿಜ್ಞಾನದ ಇತಿಹಾಸದಲ್ಲಿ ಒಂದು ಮೈಲಿಗಲ್ಲೆಂದು ಪರಿಗಣಿಸಲಾಗಿದೆ. ವಿಚಾರವಂತರು ಓದಲೇಬೇಕಾದ ಪುಸ್ತಕಗಳಲ್ಲಿ ಇದೂ ಒಂದು. ಅದಾದ 50 ವರ್ಷಗಳ ಅನಂತರ ಜೀವ ವಿಜ್ಞಾನಿಗಳ ಗಮನ ಕನಸುಗಳೆಡೆಗೆ ಹರಿದು ಅವರ ಪರಿಶ್ರಮದಿಂದಾಗಿ ಕನಸಿನ ಬಗ್ಗೆ ನಮ್ಮ ತಿಳಿವಳಿಕೆ ಹೆಚ್ಚಾಗಿ ಬೆಳೆಯಿತು.
ಅಂದಿನವರೆಗೆ ಕನಸುಗಳನ್ನು ಮನಸಿನ ಸೃಷ್ಟಿ ಎಂದೇ ಪರಿಗಣಿಸಲಾಗಿತ್ತು. ಇವರ ಸಂಶೋಧನೆಗಳ ಪರಿಣಾಮವಾಗಿ ಕನಸುಗಳಗಿರಬಹುದಾದ ದೈಹಿಕ ಹಿನ್ನೆಲೆಯನ್ನು ಗಮನಿಸುವಂತಾಯಿತು. ಇಷ್ಟೆಲ್ಲಾ ಆದರೂ ಕನಸಿನ ಪೂರ್ಣ ಪರಿಚಯ ನಮಗಿನ್ನೂ ಅಸ್ಪಷ್ಟವಾಗಿರುವುದು ಒಂದು ವಿಪರ್ಯಾಸ. ಕನಸುಗಳನ್ನು ಕುರಿತಾದ ಮೂಢನಂಬಿಕೆಗಳು, ಕನಸುಗಳ ಅಧ್ಯಯನ ನಡೆದುಬಂದ ದಾರಿ, ಕನಸಿನ ಸಿದ್ದಾಂತಗಳು, ಅವುಗಳ ವೈವಿಧ್ಯತೆ, ಮತ್ತು ಕನಸುಗಳ ಉಪಯೋಗ ಮುಂತಾದುವನ್ನು ಇಲ್ಲಿ ಸಂಕ್ಷಿಪ್ತವಾಗಿ ತಿಳಿಸಲು ಪ್ರಯತ್ನಿಸಿಲಾಗಿದೆ.
©2024 Book Brahma Private Limited.