ಲೇಖಕಿ ಡಾ. ಕೆ.ಎಸ್. ಶುಭ್ರತಾ ಅವರ ಮನೋ ವೈಜ್ಞಾನಿಕ ಕೃತಿ-ಹಿಂಸೆ ದೌರ್ಜನ್ಯಕ್ಕೊಳಗಾದ ಮಕ್ಕಳ ಮನೋವಿಕಾಸ. ಅಪಾಯ ಎಂದಾಗ ಅದು ಸಾವಿರಬಹುದು, ವಿವಿಧ ರೀತಿಯ ದೌರ್ಜನ್ಯವಿರಬಹುದು, ಹಿಂಸೆ ಇರಬಹುದು. ವಿಶ್ವದಾದ್ಯಂತ ಪ್ರತೀ ವರ್ಷ ಮಿಲಿಯನ್‌ಗಟ್ಟಲೆ ಮಕ್ಕಳು ದೌರ್ಜನ್ಯಕ್ಕೆ-ಹಿಂಸೆಗೆ ಬಲಿಯಾಗುತ್ತಿದ್ದಾರೆ. ಮಕ್ಕಳನ್ನು ಕೇಂದ್ರೀಕರಿಸಿ ಇಂತಹ ಸಂಗತಿಗಳ ಕುರಿತು ಬರೆದಿರುವ ಈ ಕೃತಿಯು ಮಕ್ಕಳು ಸಮಾಜದಲ್ಲಿ, ಕುಟುಂಬದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ನರಳುತ್ತಿರುವ ಕುರಿತು ಮನೋವೈಜ್ಞಾನಿಕ ಲೇಖನಗಳಿವೆ. ನಾಳಿನ ಭವಿಷ್ಯದ ಪ್ರಜೆಗಳಾಗಬೇಕಾದ ಮಕ್ಕಳು ದೌರ್ಜನ್ಯಕ್ಕೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇಂತಹ ಘಟನೆಗಳು ಆಗದಂತೆ ಎಚ್ಚರಿಸುವತ್ತ ಈ ಕೃತಿಯು ತನ್ನದೇ ರೀತಿಯಲ್ಲಿ ಸಾಮಾಜಿಕ ಹೊಣೆಗಾರಿಕೆ ಮೆರೆದಿದೆ. ಈ ಕೃತಿಯು ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ (2014-15) ಟ್ರಸ್ಟ್, ಧಾರವಾಡ `ಬೇಂದ್ರೆ ಗ್ರಂಥ ಬಹುಮಾನ`ಪ್ರಶಸ್ತಿ ಪಡೆದಿದೆ.
©2024 Book Brahma Private Limited.