ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಮನೋಚಂಚಲತೆ ಏಕೆ? ಮಾನಸಿಕ ದೃಢತೆ ಹೇಗೆ?. ಮನಸ್ಸು ಚಂಚಲ. ಅದನ್ನು ಸ್ವಯಂ ನಿಗ್ರಹದಿಂದ ದೃಢವಾಗಿಸಬಹುದು. ಮನಸ್ಸಿನ ಮೇಲಿನ ನಿಯಂತ್ರಣವು ಸುಲಭದ ಮಾತಲ್ಲ. ಅದಕ್ಕೆ ಸಿದ್ಧಿ ಬೇಕು. ಪ್ರಯತ್ನ ಬೇಕು. ಮನೋಶಾಸ್ತ್ರದ ಹಿನ್ನೆಲೆಯಲ್ಲಿ ತರಬೇತಿ ಬೇಕು. ಮನಸ್ಸು ಚಂಚಲವಾಗಿದ್ದರೆ ಆಗುವ ಹಾನಿ ಏನು? ಮನಸ್ಸು ದೃಢವಾಗಿಸಿಕೊಂಡರೆ ಆಗುವ ಲಾಭಗಳೇನು? ಇತ್ಯಾದಿ ಅಂಶಗಳು ತಿಳಿಸುವ ಕೃತಿ ಇದು.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE