ಲೇಖಕ ಗಣೇಶರಾವ್ ನಾಡಗೇರ್ ಅವರ ಕೃತಿ-ಮಾನಸಿಕ ಅಸ್ವಸ್ಥರ ಪುನಶ್ಚೇತನ: ಏಕೆ? ಹೇಗೆ?. ಮನೋರೋಗವೆಂದರೆ ಹುಚ್ಚು ಮತ್ತು ಅದೊಂದು ಕಳಂಕ ಎಂಬ ಆಳವಾದ ನಂಬಿಕೆ ಸಮಾಜದಲ್ಲಿತ್ತು. ಸಂಶೋಧನೆ ಮುಂದುವರಿದಂತೆ ಮಾನಸಿಕ ಅಸ್ವಸ್ಥತೆಯು ಇತರೆ ರೋಗದಂತೆ ಅದೂ ಒಂದು ಎಂದು ತಿಳಿಯಲಾಯಿತು. ಮಾನಸಿಕ ರೋಗಿಗೆ ಔಷಧದ ಜೊತೆಯಲ್ಲೇ ಆಪ್ತಸಲಹೆ, ಮನೋಚಿಕಿತ್ಸೆಗಳು ಲಭಿಸಿ ಪುನಶ್ಚೇತನ ಕಾರ್ಯಕ್ರಮಗಳು ಹೆಚ್ಚಾಗಿ ರೋಗಿಗಳು ಸಹಜ ಬದುಕು ನಡೆಸುವಂತಾಯಿತು. ಈ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಗಣೇಶ್‌ರಾವ್ ನಾಡಿಗೇರ್ ಆಪ್ತ ಸಮಾಲೋಚನೆ - ಮನೋ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವೀಧರರು. ‘ಮಾನಸಾಧಾರ’ ಪುನಶ್ಚೇತನ ಕೇಂದ್ರದಲ್ಲಿ ಆಪ್ತ ಸಮಾಲೋಚಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಭಾಷಣ, ಸಂದರ್ಶನಗಳು ಪ್ರಸಾರವಾಗಿವೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಸಮ್ಮೇಳನ - ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2010 ರಿಂದ ಶಿವಮೊಗ್ಗೆಯ ಮಾನಸ -ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಹಿರಿಯ ಆಪ್ತ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಮನದೊಳಗಿನ ಮಾತು, ಮಾನಸಿಕ ಅಸ್ವಸ್ಥರ ಪುನಶ್ವೇತನ ಹೇಗೆ? ಏಕೆ? ಮುಂತಾದವು. ...
READ MORE