ಮಕ್ಕಳ ಮನಸ್ಸು ತುಂಬ ಸೂಕ್ಷ್ಮ. ಒಂದು ಹೊಸ ಹುಡುಕಾಟ, ಕಲಿಕೆಗೆ ಹಾತೊರೆಯುತ್ತಿರುತ್ಥಾರೆ. ನಮ್ಮ ಸುತ್ತಮುತ್ತಲಿನ ಪರಿಸರ, ಜನಜೀವನ, ಜೀವನ ವ್ಯವಸ್ಥೆ ಮಕ್ಕಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಆಧುನಿಕ ತಂತ್ರಜ್ಞಾನದ ಚಳವಳಿಯಾದ ಮೊಬೈಲ್ ಚಟಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ. ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಸಂಪೂರ್ಣ, ಸಮತೋಲಿತ ಬೆಳವಣಿಗೆಗೆ ಪೂರಕವಾದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವಲ್ಲಿ ಪೋಷಕರ, ಶಿಕ್ಷಕರ ಹೊಣೆಗಾರಿಕೆ ಇಲ್ಲಿ ತಿಳಿಸಿಕೊಡಲಾಗಿದೆ.
ಮಕ್ಕಳನ್ನು ಮುದ್ದುಮಾಡಿ ಲಾಲಿಸುವಂತೆ ಬುದ್ಧಿ ಹೇಳಿ ತಿದ್ದುವುದೂ, ಕೆಲವೊಮ್ಮೆ ವಿಭಿನ್ನವಾದ ನಡವಳಿಕೆಗಳಿಂದ ಅರ್ಥ ಮಾಡಿಸುವುದು ಅಷ್ಟೇ ಅವಶ್ಯಕ. ಇಂತಹ ಎಲ್ಲ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ. ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಮುಖ್ಯವಾಗಿರುವ ಸಂಗತಿಗಳ ಬಗ್ಗೆ ವಿವರಿಸುತ್ತಲೇ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವೆಲ್ಲ ಸಾಧ್ಯತೆಗಳಿವೆ ಎಂಬ ಆಯಾಮಗಳನ್ನು ಇಲ್ಲಿ ಲೇಖಕರು ತಿಳಿಸಿದ್ದಾರೆ
©2024 Book Brahma Private Limited.