‘ಹಿಪ್ನೊ ತಂತ್ರಗಳು’ ಕೃತಿಯು ಸಮ್ಮೋಹಿನಿ ವಿದ್ಯೆ ಕುರಿತು ರಾಜಶೇಖರ ಭೂಸನೂರಮಠ ಅವರ ಬರಹಗಳ ಸಂಕಲನವಾಗಿದೆ. ಈ ಕೃತಿಗೆ ಬರೆದ ಬೆನ್ನುಡಿಯಲ್ಲಿನ ವಿಚಾರಗಳು ಹೀಗಿವೆ : ಈ ನೂತನ ಸಮಸ್ರಮಾನವು ನವಯುಗಕ್ಕೆ ನಾಂದಿಯಾಗಿದ್ದು, ನಮ್ಮ ಚಟುವಟಿಕೆಗಳ ಎಲ್ಲ ಕ್ಷೇತ್ರಗಳ ಮೇಲೆ ಹೊಸ ಬೆಳಕು ಬೀರಿ, ನಮ್ಮ ತಿಳಿವಳಿಕೆಗೆ ಅಥವಾ ಜ್ಞಾನಕ್ಕೆ ನೂತನ ಆಯಾಮಗಳನ್ನೇ ಸೃಷ್ಟಿಸಿ ಕೊಟ್ಟಿದೆ. ಹೀಗಾಗಿ, ಈ ಮೊದಲು ಪರಾ ಅಥವಾ ಇಂದ್ರಿಯಾತೀತವೆಂದು ಗಣಿಸಲ್ಪಟ್ಟಿದ್ದ ಚಟುವಟಿಕೆಗಳೆಲ್ಲ ಅಥವಾ ವಿದ್ಯಮಾನಗಳೆಲ್ಲ ನವಯುಗದ ವಿಜ್ಞಾನ ತಂತ್ರಜ್ಞಾನಗಳ ಅಳವಿನಲ್ಲಿ ಬಂದಿದ್ದು, ಬದುಕನ್ನು ಸಮಗ್ರ ಮತ್ತು ವಾಸ್ತವಿಕ ದೃಷ್ಟಿಗಳಿಂದ ಅಳೆಯಲು ಅಥವಾ ತಿಳಿದುಕೊಳ್ಳಲು ಸಾಧ್ಯವಾಗಿದೆ.
ಈ ಕೈಪಿಡಿಯಲ್ಲಿ ಹಿಪ್ನಾಟಸಂ ಅಥವಾ ಸಮ್ಮೋಹಿನಿ ವಿದ್ಯೆಯ ಪರಿಚಯವಿದೆ. ‘ ನೀವೇ ಮಾಡಿ ನೋಡಿರಿ’ ಶೈಲಿಯಲ್ಲಿ ಹಿಪ್ನೋ ತಂತ್ರಗಳನ್ನು ಹೇಗೆ ಪ್ರಯೋಗಿಸಬಹುದೆಂದು ಕಲಿಸಲಾಗಿದೆ. ವಿಶೇಷವಾಗಿ ಸಮ್ಮೋಹಿನಿ ಚಿಕಿತ್ಸೆ, ಪೂರ್ವಜನ್ಮ ಯಾನ, ಕಲಿಕೆಗೆ ಸಮ್ಮೋಹಿನಿ, ಹಿಪ್ನೋ ಸೈಬರ್ನೇಟಿಕ್ಸ್, ಸಮ್ಮೋಹಿನಿ ಧ್ಯಾನ ಮತ್ತು ಅಟೋಜೆನಿಕ್ಸ್, ಸಾಧನೆ ಮುಂತಾದ ಮುಖ್ಯ ಕ್ಷೇತ್ರಗಳ ಸಮಗ್ರ ಮಾಹಿತಿ ಈ ಕೈಪಿಡಿಯಲ್ಲಿ ಸಿಗುತ್ತದೆ. ಪ್ರಸಿದ್ಧ ಲೇಖಕರೂ, ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರೂ ಮತ್ತು ‘ಅದ್ಬುತಗಳು’ ಎಂಬ ಅತೀಂದ್ರಿಯ ವಿಜ್ಞಾನದ ಪರಿಚಯ ಗ್ರಂಥವನ್ನು ಬರೆದ ಡಾ. ರಾಜಶೇಖರ ಭುಸನೂರಮಠ ಅವರು ಈ ಕೈಪಿಡಿಗಳ ಲೇಖಕರು ಹೌದು ಎಂದು ವಿಶ್ಲೇಷಿಸಲಾಗಿದೆ.
©2024 Book Brahma Private Limited.