ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಮಕ್ಕಳಿಗೆ ಕಲಿಸಿ ಜೀವನ ಕೌಶಲಗಳು. ಪಾಲಕರನ್ನು ಅನುಸರಿಸಿಯೇ ಮಕ್ಕಳು ಕಲಿಯುತ್ತಾರೆ. ಆಚಾರ-ವಿಚಾರ ಎಲ್ಲವೂ ಪಾಲಕರನ್ನು ಮಕ್ಕಳು ಅವಲಂಬಿಸಿರುತ್ತವೆ. ಆದ್ದರಿಂದ, ಪಾಲಕರ ನಡೆ-ನುಡಿ ಮೌಲ್ಯಾಧಾರಿತವಾಗಿರಬೇಕು. ಆ ಮೂಲಕ, ನೆಮ್ಮದಿಯ ಜೀವನ ನಡೆಸಬೇಕು. ಈ ನಡಾವಳಿಕೆಯೇ ಮನುಷ್ಯ ಜನ್ಮದ ಸಾರ್ಥಕತೆ ಎನ್ನುವಂತಿರಬೇಕು. ಇಂತಹ ಆಶಯಗಳೊಂದಿಗೆ ಮಕ್ಕಳಿಗೂ ಅದನ್ನೇ ಬೋಧಿಸಬೇಕು. ತಪ್ಪಿದರೆ, ನಿರ್ದಿಷ್ಟ ಮಾದರಿ ಇಲ್ಲದೇ, ಗೊಂದಲಕ್ಕೀಡಾಗಿ, ತಲೆಯಲ್ಲಿ ಬರೀ ಸಂಶಯಗಳನ್ನೇ ತುಂಬಿಕೊಂಡು, ಬದುಕಿನಲ್ಲಿ ಏನೂ ಸಾಧಿಸದೇ ದುಃಖವನ್ನು ಅನುಭವಿಸುತ್ತಾರೆ. ಆದ್ದರಿಂದ, ಉತ್ತಮ ಜೀವನ ಕೌಶಲಗಳನ್ನು ಪಾಲಕರು ಕಲಿಸಬೇಕು. ಆ ಕೌಶಲಗಳ ಮೂಲಕವೇ ಮಕ್ಕಳು ತಮ್ಮ ಬದುಕನ್ನು ಉತ್ತಮವಾಗಿಸಿಕೊಂಡು, ಅವರು ಮುಂದೆ ತಮ್ಮ ಮಕ್ಕಳಿಗೂ ಮಾದರಿಯಾಗುತ್ತರೆ. ಈ ಹಿನ್ನೆಲೆಯಲ್ಲಿ, ಚರ್ಚಿಸಿದ ಅಂಶಗಳು ಈ ಕೃತಿಯಲ್ಲಿವೆ.
©2024 Book Brahma Private Limited.