‘ಮಕ್ಕಳತ್ರ ಮಾತಾಡಿ ಪ್ಲೀಸ್’ ಮನೋವೈದ್ಯ ಹಾಗೂ ಲೇಖಕ ವಿರೂಪಾಕ್ಷ ದೇವರಮನೆ ಅವರ ಲೇಖನಗಳ ಸಂಕಲನ. ಈ ಕೃತಿಯಲ್ಲಿ ಮಕ್ಕಳ ಬೆಳೆಯುವ ಸಾಮಾಜಿಕ ಪರಿಸರದ ಬಗ್ಗೆ ವಿವರಿಸಿದ್ದಾರೆ. ಪೋಷಕರು ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು, ಬೆಳೆಯುವ ಮಕ್ಕಳಿಗೆ ಎಂತಹ ಪರಿಸರ ಸೃಷ್ಟಿಸಬೇಕು ಎಂಬುದಾಗಿ ಮನೋವೈದ್ಯರಾಗಿರುವ ವಿರೂಪಾಕ್ಷ ಅವರು ಪೋಷಕರಿಗೆ ಸಲಹೆ ನೀಡುವ ಹಲವು ಲೇಖನಗಳನ್ನು ಈ ಸಂಕಲನದಲ್ಲಿ ನೀಡಿದ್ದಾರೆ.
ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 2008ರಿಂದ ಉಡುಪಿಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕರಾದ ವೈದ್ಯರು ಮಾನವ ಸಂಬಂಧಗಳು, ಸಂಬಂಧಗಳಲ್ಲಿ ಸಂವಹನ ಹಾಗೂ ಸಾಮರಸ್ಯ, ಪೇರೆಂಟಿಂಗ್, ಮಕ್ಕಳ ಆರೈಕೆ ಹಾಗೂ ಪೋಷಣೆ ಕುರಿತು ಹಾಗೂ ಉಪನ್ಯಾಸಗಳ ಮೂಲಕ ಪರಿಚಿತರು. ಮಕ್ಕಳು, ಹದಿಹರೆಯದವರು ಮತ್ತು ಯುವಜನತೆಯ ಶಿಕ್ಷಣ, ಬೆಳವಣಿಗೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿದ್ದು ಮದ್ಯವ್ಯಸನಿಗಳ ಮಕ್ಕಳಿಗಾಗಿ ...
READ MORE