ಮನಸ್ಸು ಜೀವನದ ಪ್ರಮುಖ ಅಡಿಪಾಯ. ಹಾಗೆ ಮನಸ್ಸು ಹಲವಾರು ನಂಬಿಕೆಗಳ ಆಗರವಾಗಿದ್ದು ಘಟಿಸುವ ಎಲ್ಲ ಘಟನೆಗಳಿಗೆ ಮನಸ್ಸು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಪ್ರತಿಯೊಂದು ಕ್ರಿಯೆ, ಪ್ರತಿಕ್ರಿಯೆಗೆ ಒಂದಲ್ಲ ಒಂದು ನಂಬಿಕೆಯೇ ಆಧಾರ ಎಬುದನ್ನು ಸದೃಶ್ಯ ವಿವರಗಳ ಮೂಲಕ ಲೇಖಕರು ವಿವರಿಸಿದ್ದಾರೆ.
ಜ್ಞಾನದ ಬೆಳಕಿನಲ್ಲಿ, ತಿಳಿವಳಿಕೆಯ ಒರೆಗೆ ತಿಕ್ಕಿ ಪ್ರಚಲಿತ ನಂಬಿಕೆಗಳು ಎಷ್ಟು ಸರಿ, ಎಷ್ಟು ತಪ್ಪು; ಯಾವುದು ಗಟ್ಟಿ, ಯಾವುದು ಟೊಳ್ಳು ಎಂದು ನಿರ್ಧರಿಸಬೇಕೆಂದು ತಿಳಿಸುವ ಮನೋ-ವೈಜ್ಞಾನಿಕ ಕೃತಿ ಇದು.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE