ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಔಷಧಗಳು; ಅಮೃತವೂ ಹೌದು, ವಿಷವೂ ಹೌದು. ಔಷಧಗಳನ್ನು ಅಗತ್ಯಕ್ಕೆ ತಕ್ಕಷ್ಟು ಸೇವಿಸದಿದ್ದರೆ ಭವಿಷ್ಯದಲ್ಲಿ ಆರೋಗ್ಯ ಕಾಯ್ದುಕೊಳ್ಳಲು ಔಷಧಗಳನ್ನೇ ಊಟವನ್ನಾಗಿ ಸೇವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಮಾತು ಇದೆ. ಆದ್ದರಿಂದ, ಔಷಧಗಳು ರೋಗ ನಿವಾರಣೆಗೆ ಮಾತ್ರ ಸೀಮಿತ ಸಾಮಾನ್ಯವಾಗಿ ಬರುವ ರೋಗಳಿಗೂ ಅನಗತ್ಯವಾಗಿ ಔಷಧಗಳನ್ನು ಸೇವಿಸುತ್ತಿದ್ದರೆ ದೇಹಕ್ಕೂ ಹಾನಿ, ಅದರಿಂದ, ಮನಸ್ಸಿನ ಮೇಲೂ ದುಷ್ಪರಿಣಾಮ ಬೀರುತ್ತದೆ. ಏಕೆಂದರೆ, ದೇಹದೊಂದಿಗೆ ಮನಸ್ಸು ಅನ್ಯೋನ್ಯ ಸಂಬಂಧ ಹೊಂದಿದೆ. ಇಂತಹ ಸಂಗತಿಗಳನ್ನು ಮನೋವೈಜ್ಞಾನಿಕವಾಗಿ ಚರ್ಚಿಸಿದ ವಿಷಯಗಳು ಈ ಕೃತಿಯ ವೈಶಿಷ್ಯಗಳಾಗಿವೆ.
©2025 Book Brahma Private Limited.