ಲೇಖಕ ಚಂದ್ರಶೇಖರ ದಾಮ್ಲೆ ಅವರು ರಚಿಸಿದ ಕೃತಿ-ನನ್ನ ಮಗಳು ತುಂಟಿ ಅಲ್ಲ!?. ಮಗುವಿನ ಮನೋವಿಕಾಸದಲ್ಲಿ ಸ್ವಯಂಭಾವ ಜಾಗೃತಿಯಾಗುವುದು ಒಂದು ಸೋಜಿಗದ ಪ್ರಕ್ರಿಯೆ, ಇದರಲ್ಲಿ ಹೆತ್ತವರ ಪಾತ್ರ ಬಹು ಮುಖ್ಯ "ಮಗುವನ್ನು ಹೆತ್ತವರು ಬೆಳೆಸುವಂತೆ ಹೆತ್ತವರನ್ನು ಮಗು ಕೂಡ ಬೆಳೆಸುತ್ತದೆ" ಎನ್ನುತ್ತಾರೆ ಮನೋವಿಜ್ಞಾನಿ ಎರಿಕ್‌ಸನ್, ಆದರೆ, ಅಗತ್ಯ ಮಾನಸಿಕ ಸಿದ್ಧತೆಯಿಲ್ಲದ ಹೆತ್ತವರಿಂದಾಗಿ ಮಗುವಿನ ವ್ಯಕ್ತಿತ್ವ ವಿಕಸನದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಮಗುವಿನ ಮನೋದೈಹಿಕ ಬೆಳವಣಿಗೆಗೆ ತಕ್ಕಂತೆ ಸ್ಪಂದಿಸಲಾಗದ ಹೆತ್ತವರು. ಮಗುವಿನ ಪ್ರಜ್ಞೆಯನ್ನು ಛಿದ್ರಗೊಳಿಸುತ್ತಾರೆ. ಇದರಿಂದಾಗಿ, ನಿರೀಕ್ಷಿತ ಮತ್ತು ವಿಕಸಿತ ವ್ಯಕ್ತಿತ್ವಗಳ ನಡುವೆ ಅಂತರ ಉಂಟಾಗುತ್ತದೆ. ಆಗ ಮಗು ಮಿಥ್ಯಾ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತದೆ. ತಮ್ಮ ಆಕಾಂಕ್ಷೆಗೆ ವಿರುದ್ಧವಾದ ವ್ಯಕ್ತಿತ್ವ ಮಗುವಿನಲ್ಲಿ ಬೆಳೆಯುತ್ತದೆ. ಅಂತಹ ಹತ್ತು ಘಟನೆಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದ್ದು, ಆಪ್ತ ಸಲಹೆಯ ಮೂಲಕ ಲೇಖಕರು ಸಮಸ್ಯೆಗಳನ್ನು ಬಗೆಹರಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ.
©2024 Book Brahma Private Limited.