ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಅವರ ಕೃತಿ-ಮನೋರೋಗಿಗಳ ಆರೈಕೆ ಹೇಗೆ? ಮನೋರೋಗಿಗಳನ್ನು ಆರೈಕೆ ಮಾಡುವುದು ಔಷಧ ನೀಡುವುದು ಮಾತ್ರವಲ್ಲ; ರೋಗಿಗಳೊಂದಿಗೆ ಹೇಗೆ ವರ್ತಿಸುತ್ತೇವೆ? ಹೇಗೆ ಅಂತರ್ ಸಂಬಂಧವನ್ನು ಹೊಂದಿರಬೇಕು? ಎಂಬುದು ಮುಖ್ಯವಾಗುತ್ತದೆ. ಏಕೆಂದರೆ, ದೇಹಕ್ಕೆ ರೋಗ ಬಂದಾಗ ಔಷಧಗಳು ಕೆಲಸ ಮಾಡುತ್ತವೆ. ಆದರೆ, ಇಲ್ಲಿ ಮನಸ್ಸಿಗೆ ತೊಂದರೆಯಾಗಿರುತ್ತದೆ. ಹೀಗಾಗಿ, ಮನಸ್ಸಿನೊಂದಿಗೆ ಮತ್ತೊಂದು ಮನಸ್ಸು ಮಾತ್ರ ನೋವನ್ನು ಶಮನ ಮಾಡಬಹುದು. ಆದ್ದರಿಂದ, ಮನೋರೋಗಿಗಳ ಆರೈಕೆಯು ರೋಗಿಗಳ ಮನಸ್ಸನ್ನು ತಿಳಿದು ಸೂಕ್ಷ್ಮವಾಗಿ ವರ್ತಿಸುವುದು, ಆರೈಕೆ ಮಾಡುವುದು ಮುಖ್ಯ ಎನ್ನುವುದನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ.
©2024 Book Brahma Private Limited.