ಮನೋವೈದ್ಯ ಡಾ. ಸಿ.ಆರ್ ಚಂದ್ರಶೇಖರ್ ಅವರ ʼಮೈ ಮನಸ್ಸಿನ ಆರೋಗ್ಯ ಜೀವನದ ಸಮಾಧಾನʼ ಕೃತಿಯು ಆರೋಗ್ಯದ ಕುರಿತ ಕವನ ಸಂಕಲನವಾಗಿದೆ. ಹುಟ್ಟು ಸಾವಿನ ಮಧ್ಯೆ ನಾಲ್ಕು ಮಜಲುಗಳಿವೆ: ಬಾಲ್ಯ- ಯೌವನ- ಪ್ರೌಢ- ಮುಪ್ಪು. ಬಾಲ್ಯದಲ್ಲಿ ನಾವು ಪರಾವಲಂಬಿಗಳು. ತಂದೆತಾಯಿಗಳು ನಮ್ಮನ್ನು ಸಾಕಿ ಸಲಹುತ್ತಾರೆ. ಯೌವನದಲ್ಲಿ ನಾವು ವಿದ್ಯೆ, ಬುದ್ದಿ ವಿವೇಕ, ವಿವೇಚನೆ, ವಿವಿಧ ಜೀವನ ಕೌಶಲ್ಯಗಳನ್ನು ಕಲಿಯುತ್ತೇವೆ. ಮುಪ್ಪಿನಲ್ಲಿ ಕ್ಷೀಣಿಸುವ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳ ಮಿತಿಯಲ್ಲಿ ಕಾಯಿಲೆಗಳನ್ನುನಿರ್ವಹಣೆ ಮಾಡುವ ಕುರಿತ ವಿಚಾರಗಳು ಇಲ್ಲಿಯ ಕವನಗಳ ವಸ್ತುವಾಗಿದೆ. ನಾವು ಆರೋಗ್ಯವಾಗಿ ನೆಮ್ಮದಿಯಾಗಿ ಬದುಕುವುದು ಹೇಗೆ? ಸದಾ ಸಮಾಧಾನಚಿತ್ತವಾಗಿರುವುದು ಹೇಗೆ? ಆತ್ಮವಿಶ್ವಾಸವನ್ನು ವರ್ಧಿಸುವುದು ಹೇಗೆ? ಎಂಬುದನ್ನು ಅರಿತುಕೊಳ್ಳಲು ನಾಲ್ಕು ಸಾಲುಗಳ ಈ ಪದ್ಯ-ಗದ್ಯಗಳನ್ನು ಓದಿ ಎನ್ನುತ್ತಾರೆ ಲೇಖಕ ಡಾ. ಸಿ.ಆರ್ ಚಂದ್ರಶೇಖರ್.
©2024 Book Brahma Private Limited.