‘ಹಲವು ಜೀವನ ಹಲವು ಮಾರ್ಗದರ್ಶಕರು’ ಅಮೇರಿಕಾದ ಪ್ರಖ್ಯಾತ ಮನೋವೈದ್ಯ ಡಾ.ಬ್ರೀಯಾನ್ ವೈಸ್ ಅವರ ಕೃತಿಯನ್ನು ಎನ್. ಶ್ರೀಧರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬ್ರಿಯಾನ್ ವೈಸ್ ಅವರು ತಮ್ಮ ಯುವ ಮನೋರೋಗಿ ಮತ್ತು ಅವರ ಹಿಂದಿನ ಜನ್ಮಗಳ ಬಗ್ಗೆ ಬರೆದ ಸತ್ಯ ಕತೆ ಇದು. ಸಮ್ಮೋಹನ ವಿದ್ಯೆಯ ನೆರವಿನಿಂದ ಹಿಂದಿನ ಜನ್ಮಗಳ ವಿವರಗಳಿಂದ ಅವಳ ಕಾಯಿಲೆಗಳನ್ನು ಗುಣಪಡಿಸಿದ್ದಲ್ಲದೆ ಜೀವನ ಹಾಗೂ ಸಾವಿನ ಬಗ್ಗೆ ಅನೇಕ ಮಾಹಿತಿಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲು, ಒರೆಗೆ ಹಚ್ಚಲು ಪ್ರಯತ್ನಿಸಿದ್ದಾರೆ. ಮನೋವಿಜ್ಞಾನದಿಂದ ಅತೀಂದ್ರಿಯ ವಿಜ್ಞಾನಕ್ಕೆ ಸೇತುವೆ ಕಟ್ಟಲು ಹವಣಿಸಿದ್ದಾರೆ. ರೋಗಿಯ ಮಾರ್ಗದರ್ಶಕರ ಮೂಲಕ ಹೊರಹೊಮ್ಮಿದ ಅನೇಕ ಸಂದೇಶಗಳು ಸಾರ್ವಕಾಲಿಕ ಸತ್ಯವನ್ನು ಬಿಂಬಿಸುತ್ತವೆ ಮತ್ತು ಓದುಗರನ್ನೂ ಯೋಚನೆಗೀಡು ಮಾಡುತ್ತವೆ.
‘ಹಲವು ಜೀವನ ಹಲವು ಮಾರ್ಗದರ್ಶಕರು’ಕೃತಿಯ ಕುರಿತಾಗಿ ಅನುವಾದಕರಾದ ಎನ್. ಶ್ರೀಧರ ಅವರ ಮಾತು.
©2024 Book Brahma Private Limited.