ಅಡ್ಡೂರು ಕೃಷ್ಣರಾವ್ ಅವರ ಕೃತಿ-ಮನಸ್ಸಿನ ಮ್ಯಾಜಿಕ್. ಮನಸ್ಸು ವಿಶ್ವದಲ್ಲಿ ಕಾಣಬರುವ ಅದ್ಭುತಗಳಲ್ಲಿ ಅದ್ಭುತ. ಕಲ್ಪನೆ, ಕನಸು, ವಿಚಾರ, ಭಾವ, ವರ್ತನೆ ಹೀಗೆ ಎಲ್ಲವನ್ನೂ ಈ ಮನಸ್ಸು ರೂಪು ನೀಡುತ್ತದೆ. ಸಾಹಿತ್ಯ ರಚನೆಗೂ ಮನಸ್ಸೇ ಕಾರಣ. ಸಂಕಲ್ಪಗಳ ಈಡೇರಿಕೆಗೂ, ಹತಾಶೆ-ನಿರಾಶೆಗಳಿಗೂ ಸುಖ-ದುಃಖ ಹೀಗೆ ಮನಸ್ಸು ವ್ಯಕ್ತಿಯೊಬ್ಬರ ಶಕ್ತಿ ಕೇಂದ್ರ. ಮನಸ್ಸಿನ ಅಪಾರ ಸಾಧ್ಯತೆಗಳಗಳ -ಸ್ವರೂಪಗಳ ಕುರಿತು ಚಿತ್ರಣ ನೀಡುವ ಈ ಕೃತಿಯು ಹತ್ತು ಹಲವು ಕಥೆ-ಉಪಕಥೆಗಳನ್ನು, ಉದಾಹರಣೆಗಳ ಮೂಲಕ ಮನಸ್ಸಿನ ಅದ್ಭುತವನ್ನು ಕಟ್ಟಿಕೊಡುತ್ತದೆ. ನವಕರ್ನಾಟಕ ಪ್ರಕಾಶನದ ವ್ಯಕ್ತಿ ವಿಕಾಸ ಮಾಲೆಯಡಿ ಪ್ರಕಟಿತ ಈ ಕೃತಿಯನ್ನು ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಸಂಪಾದಿಸಿದ್ದಾರೆ.
(ಹೊಸತು, ಆಗಸ್ಟ್ 2014, ಪುಸ್ತಕದ ಪರಿಚಯ)
ವಜ್ರದಷ್ಟು ಕಠೋರವೂ ಹೂವಿನಷ್ಟು ಕೋಮಲವೂ ಆಗಬಲ್ಲುದು ಯಾವುದು ? ಮನಸ್ಸು ! ಹೌದು, ನಮ್ಮ ದೇಹದೊಂದಿಗೆ ನಿಕಟವಾಗಿದ್ದು ಭೌತಿಕ ಕಣ್ಣುಗಳಿಗೆ ಅಗೋಚರವಾಗಿ ಅನುಭವಕ್ಕೆ ದಕ್ಕಬಲ್ಲ ಒಂದು ಸೋಜಿಗ. ನಮ್ಮ ಒಳಿತು- ಕೆಡುಕುಗಳನ್ನು ನಿರ್ಧರಿಸುವಲ್ಲಿ ಮನಸ್ಸಿನ ಪಾತ್ರ ಹಿರಿದು. ಬಲು ಸೂಕ್ಷ್ಮವೂ ಹೌದು, ಅಷ್ಟೇ ಚಂಚಲ ಪ್ರವೃತ್ತಿಯದೂ ಹೌದು. ಅದನ್ನು ಅಂಕೆಯಲ್ಲಿಟ್ಟು ಹುಚ್ಚು ಹೊಳೆಯಂತೆ ಹರಿಯಬಿಡದೆ ಏಕಾಗ ಮನಸ್ಸಿನಿಂದ ಸರಿ ನಿರ್ಧಾರ ತೆಗೆದುಕೊಂಡರೆ ನಮ್ಮ ವ್ಯಕ್ತಿತ್ವ ವಿಕಸನ ಖಂಡಿತ ಸಾಧ್ಯ. ನಿರ್ಧಾರಗಳು ಕೇವಲ ನಮ್ಮ ಸ್ವಾರ್ಥಕ್ಕೆ ಮಾತ್ರವಾಗಿರದೆ, ಏಕಪಕ್ಷೀಯವೂ ಆಗಿರಬಾರದು. ಇದು ಅಂದುಕೊಂಡಷ್ಟು ಸುಲಭವೇನೂ ಅಲ್ಲ, ಆದರೆ ಅತಿ ಕಠಿಣ ವಿಚಾರವೂ ಅಲ್ಲ. ದೃಢ ಸಂಕಲ್ಪ, ದೃಢ ಮನಸ್ಸು ಬೇಕಾಗಿರುವುದು ಇಂಥ ಸಂದರ್ಭದಲ್ಲೇ. ಚಂಚಲ ಮನಸ್ಸಿನ ವಿವಿಧ ಮಜಲುಗಳನ್ನು ಪರಿಚಯಿಸುತ್ತ ಇಂದಿನ ದಿನಗಳಲ್ಲಿ ಎದುರಿಸಬೇಕಾದ ಹಲವು ಹತ್ತು ನಡೆಗಳನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ಕಿವಿಮಾತುಗಳಿವೆ. ಪ್ರಪಂಚದ ಎಷ್ಟೊಂದು ಮಹನೀಯರು ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಇಟ್ಟ ಹೆಜ್ಜೆಗಳನ್ನು ಉದಾಹರಿಸುತ್ತ ಲೇಖಕ ಶ್ರೀ ಅಣ್ಣೂರು ಕೃಷ್ಣ ರಾವ್ ಇಲ್ಲಿ ಮನಸ್ಸಿನ ಮಹತ್ವವನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ಮನಸ್ಸಿಟ್ಟು ಓದಿ. ಮನನ ಮಾಡಿಕೊಳ್ಳಿ. ಅದರಂತೆಯೇ ನಡೆಯಿರಿ,
©2024 Book Brahma Private Limited.