ಹದಿಹರೆಯದಲ್ಲಿ ಹಲವಾರು ಗೊಂದಲಗಳು, ಸಮಸ್ಯೆಗಳು ಎದುರಾಗುವುದು ಸಹಜ ಮತ್ತು ಅಷ್ಟೇ ಅದರಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಆಸೆ ಆದರ್ಶಗಳ ನಡುವೆ ಕಲ್ಪನೆಯ ವಾಸ್ತವಿಕತೆಗಳ ಮಧ್ಯೆ ತನ್ನತನದ ಹುಡುಕಾಟ, ಕಲಿಕೆಯ ಬೆನ್ನು ಹತ್ತಿ ಉದ್ಯೋಗದ ಅನ್ವೇಷಣೆ, ಮೈಮನಗಳಲ್ಲಿ ಲೈಂಗಿಕತೆ, ಅನುಪಮ ಅನುಭವಗಳ ಒರತೆ, ಅತ್ತ ಬಾಲ್ಯದ ಮುಗ್ಧತೆ ಇಲ್ಲ ಇತ್ತ ವಯಸ್ಸಿನ ಪ್ರೌಢತೆ ಇಲ್ಲದ ತ್ರಿಶಂಕು ಸ್ಥಿತಿಯಾಗಿರುತ್ತದೆ. ಇಂತಹ ಮನದ ತುಂಬ ಗೊಂದಲದ ಆಂದೋಲನಗಳಿಗೆ ಪರಿಹಾರ ಸೂಚಿಸುವ ಕೃತಿ ಇದಾಗಿದೆ. ಹದಿಹರೆಯದ ವಿವಿಧ ಮುಖಗಳ ಚಿತ್ರಣ ಇಲ್ಲಿ ನಿಮಗೆ ಸಿಗುತ್ತದೆ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE