ಲೇಖಕ ಪಿ.ವಿ. ಭಂಡಾರಿ ಅವರ ಕೃತಿ ʻಸ್ಕೂಲ್ ಫೋಬಿಯಾʼ ಶಾಲೆ...ನಾ ಒಲ್ಲೆ. ಪುಸ್ತಕವು ಮಕ್ಕಳು ಶಾಲೆಗೆ ಹೋಗದಿರಲು ತೋರುವ ನಿರಾಕರಣದ ಹಿಂದಿರುವ ಕಾರಣಗಳು, ಅದಕ್ಕೆ ಸಮರ್ಪಕವಾದ ಪರಿಹಾರಗಳ ಬಗ್ಗೆ ವಿವರಿಸುತ್ತದೆ. ಸಾಮಾನ್ಯವಾಗಿ ಮಕ್ಕಳು ಒಂದಲ್ಲಾ ಒಂದು ಕಾರಣದಿಂದ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಆದರೆ ಕೆಲವು ಮಕ್ಕಳು ಶಾಲೆ ಅಂದಾಕ್ಷಣ ವಿಪರೀತ ಭಯಕ್ಕೊಳಗಾಗುವುದು, ತರಗತಿಯಲ್ಲಿ ಅಸ್ವಸ್ಥತೆಯನ್ನು ತೋರುವುದು, ಆತಂಕಕ್ಕೊಳಗಾಗುವುದು ಅವರಲ್ಲಿ ಕಂಡುಬರುವ ಫೊಬಿಯಾದ ಒಂದು ರೀತಿಯ ಲಕ್ಷಣವಾಗಿದೆ. ಹಾಗಾಗಿ ಅಂತಹ ಸಮಸ್ಯೆಗಳ ಕುರಿತು ಮನೋವೈಜ್ಞಾನಿಕವಾಗಿ ಈ ಕೃತಿಯು ವಿಶ್ಲೇಷಿಸುತ್ತದೆ.
©2025 Book Brahma Private Limited.