ಇದು ಮನೋವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕ. ಈ ಕೃತಿಯನ್ನು ಖ್ಯಾತ ನಿರ್ದೇಶಕ ಗಿರೀಶ್ ಕಾರ್ನಾಡ್ ಅವರು ದೂರದರ್ಶನಕ್ಕಾಗಿ ಧಾರಾವಾಹಿ ಸಿದ್ಧಪಡಿಸಿದ್ದರು. ಆಗ ಅದು ಬಹಳ ಜನಪ್ರಿಯವಾಗಿತ್ತು.
ಡಾ.ಅಶೋಕ್ ಪೈ ಮನೋವೈದ್ಯರು. ಬರಹಗಾರರು. ಚಲನಚಿತ್ರ ನಿರ್ಮಾಪಕರು. ತಂದೆ ಕಟೀಲು ಅಪ್ಪು ಪೈ, ತಾಯಿ ವಿನೋದಿನಿ ಪೈ. 1946ರ ಡಿಸೆಂಬರ್ 30 ರಂದು ಜನಿಸಿದರು. ಶಿವಮೊಗ್ಗದಲ್ಲಿ ಮನೋರೋಗಿಗಳ ಶುಶ್ರೂಷೆಗೆ ಮಾನಸ ನರ್ಸಿಂಗ್ ಹೋಮ್ ಹಾಗೂ ಮಾನಸ ಎಜುಕೇಶನ್ ಫೌಂಡೇಶನ್ ಸ್ಥಾಪಿಸಿದರು. ಪತ್ನಿ ಡಾ. ರಜನಿ ಪೈ ಅವರೊಂದಿಗೆ ಮನಃಶಾಸ್ತ್ರದ ಆಳಸ್ಪರ್ಶವುಳ್ಳ ತಮ್ಮದೇ ಕತೆಗಳನ್ನು ಆಧರಿಸಿದ ಉಷಾಕಿರಣ, ಆಘಾತ, ಮನಮಂಥನ ಮೊದಲಾದ ಚಲನಚಿತ್ರಗಳನ್ನು ನಿರ್ಮಿಸಿದ್ದರು. ನಾ. ಡಿಸೋಜ ಕಾದಂಬರಿ ಆಧಾರಿತ 'ಕಾಡಿನ ಬೆಂಕಿ' ಚಿತ್ರ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗಳಿಸಿತ್ತು. ಉಷಾಕಿರಣ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಹಾಗೂ ಆಘಾತ ಚಿತ್ರಕ್ಕೆ ರಾಜ್ಯಪ್ರಶಸ್ತಿ ಸಂದಿತ್ತು. ...
READ MORE