ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ವ್ಯಸನಮುಕ್ತ ಜೀವನ. ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿ, ಅಫೀಮು, ಗಾಂಜಾ ಮಾತ್ರವಲ್ಲ; ಜೂಜಾಟದಂತಹ ವ್ಯಸನಗಳಿಗೆ ಬಹು ಜನರು ಮಾರು ಹೋಗಿ, ವ್ಯಸನಗಳ ದಾಸರಾಗುತ್ತಿದ್ದಾರೆ. ಇಂತಹ ವ್ಯಸನಗಳಿಂದ ಮುಕ್ತರಾಗುವುದು ಸುಲಭವಲ್ಲ. ಅದಕ್ಕೆ ತರಬೇತಿ, ನಿರಂತರ ಚಿಕಿತ್ಸೆ ಅನಿವಾರ್ಯ. ಮನಸ್ಸಿನ ದೃಢ ಸಂಕಲ್ಪದಿಂದಲೂ ವ್ಯಸನ ಮುಕ್ತರಾಗಬಹುದು. ವ್ಯಸನಮುಕ್ತರಾಗಬೇಕು ಎಂದರೆ ಆರೋಗ್ಯವಂತರಾಗಬೇಕು ಎಂದೇ ಅರ್ಥ. ಆರೋಗ್ಯವೊಂದು ಇದ್ದರೆ ಸಕಲ ಸಂಪತ್ತುಗಳು ನಮ್ಮಲ್ಲಿಯೇ ಇದ್ದಂತೆ. ತಪ್ಪಿದರೆ ಏನೆಲ್ಲ ಇದ್ದರೂ ವ್ಯರ್ಥ. ಈ ಹಿನ್ನೆಲೆಯಲ್ಲಿ ಮನೋವೈದ್ಯರಾದ ಲೇಖಕರು ಸಲಹೆಗಳನ್ನು ನೀಡಿದ್ದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.