ಬುದ್ಧಿಶಕ್ತಿ ಒಂದಲ್ಲ, ಹಲವಿವೆ ಎಂದು ಹಲವಾರು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಹಲವಾರು ಮನೋವಿಜ್ಞಾನಿಗಳು ಮನುಷ್ಯನ ಬುದ್ಧಿಶಕ್ತಿಯ ಬಗೆಗೆ ಸಂಶೋಧನೆ ಮಾಡಿದ್ದಾರೆ. ಅವರಲ್ಲಿ ಹೋವರ್ಡ್ ಗಾರ್ಡ್ನರ್ ಬುದ್ಧಿಶಕ್ತಿಯು ಒಂದೇ ಅಲ್ಲ. ಬಹುವಿಧ ಬುದ್ಧಿಶಕ್ತಿಗಳಿವೆ ಎಂದು ಪ್ರತಿಪಾದಿಸಿ ಮನೋವಿಜ್ಞಾನ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಚಿಂತನೆಯನ್ನು ಹುಟ್ಟುಹಾಕಿದ್ದಾನೆ. ಈ ಬಗ್ಗೆ ಹಲವು ಗ್ರಂಥಗಳನ್ನೂ ಬರೆದು ಸುಮಾರು ಒಂಬತ್ತು ರೀತಿಯ ಬುದ್ಧಿಶಕ್ತಿಗಳಿವೆಯೆಂದು ಮನೋವಿಜ್ಞಾನ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದಾನೆ. ಅದರ ವಿವರಗಳೆಲ್ಲವೂ ಈ ಕೃತಿಯಲ್ಲಿ ಲಭ್ಯವಿವೆ. ಬುದ್ಧಿಶಕ್ತಿ ಮನುಷ್ಯನಿಗೆ ಮಾತ್ರ ಸೀಮಿತವೆಂದು ಭಾವಿಸಿದ ಸನ್ನಿವೇಶದಲ್ಲಿ ಎಲ್ಲರ ಬುದ್ಧಿಮಟ್ಟವೂ ಒಂದೇ ಏಕಾಗಿಲ್ಲ ಎಂಬಂತಹ ಪ್ರಶ್ನೆಗಳಿಗೂ ಉತ್ತರಿಸಿದ ಗಾರ್ಡ್ನರ್ ವಿವಿಧ ದೇಶಗಳಿಗೆ ಭೇಟಿ ನೀಡಿ ತನ್ನ ಸಿದ್ಧಾಂತದ ಪ್ರಚಾರ ಹಾಗೂ ಪ್ರತಿಪಾದನೆಗಳಿಗೆ ಎದುರಾದ ಪ್ರಶ್ನೆಗಳಿಗೆಲ್ಲ ಸಮರ್ಪಕ ಉತ್ತರ ನೀಡಿ ಈ ಸಿದ್ಧಾಂತವನ್ನು ಸ್ವಾಗತಿಸುವಂತೆ ಮಾಡಿದ್ದು ಸಾಮಾನ್ಯ ಸಾಧನೆಯೇನಲ್ಲ. ಈ ಕುರಿತು ವಿವರವಾದ ಮಾಹಿತಿ ಕೃತಿಯ ಒಳಪುಟಗಳಲ್ಲಿ ದಾಖಲಾಗಿದೆ.
©2024 Book Brahma Private Limited.