ಈಡಿಪಸ್ ಕಾಂಪ್ಲೆಕ್ಸ್

Author : ಎಂ. ಬಸವಣ್ಣ

Pages 180

₹ 150.00




Year of Publication: 2012
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040
Phone: 9448804905

Synopsys

“ಈಡಿಪಸ್ ಕಾಂಪ್ಲೆಕ್ಸ್” ಲೇಖಕ, ಮನಃಶಾಸ್ತ್ರಜ್ಞ ಎಂ. ಬಸವಣ್ಣ ಅವರ ಮನೋವೈಜ್ಞಾನಿಕ ಲೇಖನಗಳ ಸಂಕಲನ. ಮನಃಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ನಿವೃತ್ತ ಉಪನ್ಯಾಸಕರಾದ ಎಂ.ಬಸವಣ್ಣ ಅವರು ಬಹಳ ಸರಳವಾಗಿ, ಆಪ್ತವಾಗಿ ಮನೋವೈಜ್ಞಾನಿಕ ವಿಚಾರಗಳನ್ನು ವಿವರಿಸಿದ್ದಾರೆ. ಈ ಕೃತಿ ಮನೋವಿಜ್ಞಾನಕ್ಕೆ ಪ್ರವೇಶಿಕೆ ಒದಗಿಸುತ್ತದೆ.

ಪ್ರೇಮ, ದುಃಖದಿಂದ ಹಿಡಿದು ಸ್ವಸ್ಥ ವ್ಯಕ್ತಿತ್ವ, ಮಕ್ಕಳು, ಸಾಹಿತ್ಯದವರೆಗೆ ಲೇಖನಗಳು ಆಯಾ ವಸ್ತುವನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸುತ್ತ ಹೊಸ ಹೊಳಹುಗಳನ್ನು ತೆರೆದಿಡುತ್ತದೆ. ಮನೋವಿಜ್ಞಾನದ ಬಗೆಗಿರುವ ಅಗಾಧ ಸಾಹಿತ್ಯವನ್ನು ಲೇಖಕರು ಚೊಕ್ಕದಾಗಿ ಸರಳವಾಗಿ ಅತ್ಯಂತ ಸಂಕ್ಷಿಪ್ತವಾಗಿ ಓದುಗನ ಎದುರಿಗಿಟ್ಟಿದ್ದಾರೆ.

About the Author

ಎಂ. ಬಸವಣ್ಣ

ಎಂ.ಬಸವಣ್ಣ- ಹುಟ್ಟಿದ್ದು 1933, ಚಾಮರಾಜನಗರ ಜಿಲ್ಲೆಯ ಮಂಗಲ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಾಯೋಗಿಕ ಮನಃಶಾಸ್ತ್ರದಲ್ಲಿ 1955ರಲ್ಲಿ ಎಂ.ಎ.ಪದವಿ. ಕ್ಲಿನಿಕಲ್ ಮನಃಶಾಸ್ತ್ರದಲ್ಲಿ ನಿಮ್ಯಾನ್ಸ್ ನಿಂದ 1958ರಲ್ಲಿ ಡಿಪ್ಲೊಮಾ. 1970ರಲ್ಲಿ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ. ಇದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇರಿ 1993ರಲ್ಲಿ ಪ್ರಾಧ್ಯಾಪಕರಾಗಿ ವಿಶ್ರಾಂತರಾದರು. ತಮ್ಮ ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಅಧ್ಯಾಪಕ ವೃತ್ತಿಯನ್ನು ಪ್ರೀತಿಸುವ ಬಸವಣ್ಣನವರು ವ್ಯಕ್ತಿತ್ವ ವಿಕಾಸದ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿ, ದೇಶದ ಉದ್ದಗಲಕ್ಕೂ ಉಪನ್ಯಾಸಗಳನ್ನು ಕಮ್ಮಟಗಳನ್ನು ನಡೆಸಿದ್ದಾರೆ. ಗುಲ್ಬರ್ಗಾ, ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ...

READ MORE

Related Books