ಮಾನವನ ಮನಸ್ಸು ಅತ್ಯಂತ ಸಂಕೀರ್ಣ, ಸೂಕ್ಷ್ಮ. ಸಕಾರಾತ್ಮಕ ಭಾವನೆಗಳಾದ ನೆಮ್ಮದಿ, ಆತ್ಮವಿಶ್ವಾಸ, ಪ್ರೀತಿ, ಸಂತಸಗಳು ಇದ್ದಲ್ಲಿ ಬದುಕು ಸಹಜವಾಗಿ ಸುಂದರವಾಗಿ ನಳನಳಿಸುತ್ತದೆ. ಅದಿಲ್ಲದೇ, ಭಯ, ಕೋಪ, ಮತ್ಸರ, ಕೀಳರಿಮೆ, ದುಃಖ ಮುಂತಾದ ನಕಾರಾತ್ಮಕ ಭಾವನೆಗಳು ತುಂಬಿಕೊಂಡಲ್ಲಿ ವ್ಯಕ್ತಿಗೆ ಮಾತ್ರವಲ್ಲ; ಕುಟುಂಬದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಂತಹ ನಕಾರಾತ್ಮಕ ಮಾತು, ಚಿಂತನೆ ನಡವಳಿಕೆಗೆ ಕಾರಣಗಳೇನು ಎಂಬುದನ್ನು ಈ ಕೃತಿ ಚರ್ಚಿಸುತ್ತಾ ಮಾನಸಿಕ ಸಧೃಡತೆಗೆ ಬೇಕಾದ ಸಿದ್ಧತೆಯನ್ನು ತಿಳಿಸುತ್ತದೆ.
ನಕಾರಾತ್ಮಕ ಮನಸ್ಸಿನ ಆಲೋಚನೆಗಳ ಲಕ್ಷಣಗಳೇನು? ಅದನ್ನು ಧನಾತ್ಮಕವಾಗಿ ಬದಲಿಸಿಕೊಳ್ಳಲು ಬೇಕಾದ ಸೂಕ್ತ ಮಾಹಿತಿಯನ್ನು ಒದಗಿಸುತ್ತದೆ. ಇಲ್ಲಿರುವ ಸಲಹೆಗಳು ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿ, ಮನಶಾಂತಿ ಕಂಡುಕೊಳ್ಳಬಹುದಾದ ಮಾರ್ಗಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.
©2024 Book Brahma Private Limited.