’ಮಗುವಿನ ಬೆಳವಣಿಗೆ ಒಂದು ಅವಲೋಕನ’ ಕವಿತಾ ಮಲ್ಲಿಕಾರ್ಜುನ ಎಸ್. ಕೆ ಅವರ ಮಕ್ಕಳ ಆರೋಗ್ಯ ಕುರಿತ ಅವಲೋಕನ ಕೃತಿ. 12 ಆಧ್ಯಾಯಗಳಿವೆ. ಮಗುವಿನ ಬೆಳವಣಿಗೆ ಹಂತಗಳು, ಮಕ್ಕಳ ಸಮಗ್ರ ವಿಕಾಸ, ಕೌಟುಂಬಿಕ ವಿಕಾಸ, ಶೈಕ್ಷಣಿಕ ವಿಕಾಸ, ಬೌದ್ದಿಕ ವಿಕಾಸ, ಸಾಮಾಜಿಕ ವಿಕಾಸ, ನೈತಿಕ ವಿಕಾಸ, ಅಧ್ಯಾತ್ಮಿಕ ವಿಕಾಸ, ವಿಶ್ವ ಬಂಧುತ್ವದ ಜ್ಞಾನ ಬೋಧನೆ, ವೈಜ್ಞಾನಿಕ ವಿಕಾಸ, ಹದಿ ಹರೆಯ ಎಂದರೇನು? ಹದಿ ಹರೆಯದ ವಯಸ್ಸಿನ ಕೆಲವು ಮುಖ, ಮುಟ್ಟು ಎಂದರೇನು? ಇದು ಹೇಗೆ ಯಾವಾಗ ನಡೆಯುತ್ತದೆ? ಸ್ವಚ್ಛತೆ ಯಾರಿಗೆ ಏಕೆ ಬೇಕು? ಆರೋಗ್ಯ, ಮಕ್ಕಳ ನಿರ್ದೀಷ್ಟ ಗುರಿ, ಮಕ್ಕಳ ಲೈಂಗಿಕ ಶೋಷಣೆ, ಹರೆಯದ ಮಕ್ಕಳಲ್ಲಿ ಲೈಂಗಿಕ ಶಿಕ್ಷಣದ ಪರಿಪಕ್ವತೆ, ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ, ಲಿಂಗ ಸಮಾನತೆ. ಹೀಗೆ ವಿವಿಧ ಅಧ್ಯಾಯಗಳಿವೆ.
ಮೂರು ವರ್ಷದ ಮಕ್ಕಳಿಂದ ಹಿಡಿದು ಹದಿಹರೆಯದ ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ಪೂರಕವಾಗುವ ಉಪಯುಕ್ತ ಅಂಶಗಳು ಇಲ್ಲಿವೆ. ಮಕ್ಕಳ ಸರ್ವಾಂಗೀಣ ವಿಕಾಸದ ಸರಿದಾರಿ ತೋರುವ ಕೃತಿ ಇದು. ಸರಳ ನಿರೂಪಣೆ ಇರುವುದರಿಂದ ಪ್ರೌಢ ಮಕ್ಕಳು ಸ್ವತಃ ಓದಿ ಗ್ರಹಿಸಿಕೊಳ್ಳಬಹುದಾಗಿದ್ದು, ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ಮಾಡುತ್ತಿರುವವರಿಗೆ , ಶಿಕ್ಷಕರಿಗೆ, ಪಾಲಕ-ಪೋಷಕರಿಗೆ, ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳಿಗಾಗಿ ಸೇವೆ ಮಾಡುವಂತಹ ಎಲ್ಲರಿಗೂ ಅತ್ಯುಪಯುಕ್ತ ಕೃತಿ’
©2025 Book Brahma Private Limited.