ಒತ್ತಡವೂ ನಿಮ್ಮದೇ ಪರಿಹಾರವೂ ನಿಮ್ಮದೇ

Author : ಸಿ.ಆರ್. ಚಂದ್ರಶೇಖರ್

Pages 132

₹ 95.00




Year of Publication: 2018
Published by: ವಸಂತ ಪ್ರಕಾಶನ
Address: 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್‌ ಹತ್ತಿರ, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011

Synopsys

ತಂತ್ರಜ್ಞಾನದ ಅಭಿವೃದ್ದಿ ಜನರ ಜೀವನ ರೂಪವನ್ನೇ ಬದಲಿಸಿದೆ. ಎಲ್ಲೆ ಯಾರನ್ನೇ ನೋಡಿದರೂ ಬ್ಯುಸಿ ಎನ್ನುವುದು ಸರ್ವೆ ಸಾಮಾನ್ಯ. ಈ ಬ್ಯುಸಿ ಅನ್ನುವುದು ಒತ್ತಡ ಆಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು. ಮನೆ, ಕೆಲಸ ಹೀಗೆ ಎಲ್ಲ ಕಡೆ ಒತ್ತಡದಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಪ್ರಸ್ತುತ ಕೃತಿಯು ಒತ್ತಡವನ್ನು ಸರಿಯಾಗಿ ನಿರ್ವಹಿಸುವುದು ಹೇಗೆ? ಒತ್ತಡದಿಂದ ಪಾರಾಗುವುದು ಹೇಗೆ ಎಂಬುದರ ಕುರಿತು ವಿವರಿಸುತ್ತದೆ.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books