ಈ ಕೃತಿಯ ವೈಶಿಷ್ಟ್ಯವೆಂದರೆ ಸರಳತೆ. ಲೇಖಕರು ಎಲ್ಲರಿಗೂ ಅರ್ಥವಾಗುವಂತಹ ಸುಲಲಿತ ಭಾಷೆಯಲ್ಲಿ, ಮನಕ್ಕೆ ನಾಟುವಂತಹ ಉದಾಹರಣೆಗಳನ್ನು ನೀಡುತ್ತ, ದೈನಂದಿನ ಬದುಕಿನಲ್ಲಿ ಈ ಪುಸ್ತಕವು ಸಹಕಾರಿಯಾಗುವಂತೆ ಮಾಡಿದ್ದಾರೆ.
ಮನೋರಂಜನೆಗಾಗಿ ಓದುವ ಕೃತಿಯಲ್ಲದೆ ತಮ್ಮ ಬದುಕನ್ನು ಕೀಳರಿಮೆ ಮುಕ್ತವಾಗಿ ಉತ್ತಮವಾಗಿ ರೂಪಿಸಿಕೊಳ್ಳಲು ದಾರಿ ದೀಪವಾಗಬಲ್ಲದು. ದೀಪವನ್ನು ಹೇಗೆ ಹಿಡಿಯುತ್ತೇವೆ ಎಂಬುದರ ಮೇಲೆ ದಾರಿಯು ಎಷ್ಟು ಗೋಚರಿಸುತ್ತದೆ ಎಂಬುದು ಅವಲಂಬಿತವಾಗಿರುವಂತೆ ಈ ಕೃತಿಯನ್ನು ನಾವು ಹೇಗೆ ಓದುತ್ತೇವೆ ಎಂಬುದರಿಂದ ನಾವೆಷ್ಟು ಪ್ರಯೋಜನ ಪಡೆಯಬಲ್ಲೆವು ಎಂಬುದನ್ನು ನಿರ್ಧರಿಸುತ್ತದೆ.
ತಿಪ್ಪೇಸ್ವಾಮಿ ಕೆ. ಟಿ. ಅವರು 4 ಏಪ್ರಿಲ್ 1986ರಲ್ಲಿ ಶಿವಮ್ಮ ಮತ್ತು ತಿಪ್ಪಣ್ಣ ದಂಪತಿ ಮಗನಾಗಿ ಸಿರಾ ತಾಲ್ಲೂಕು ಕಳ್ಳಂಬೆಳ್ಳ ಗ್ರಾಮದಲ್ಲಿ ಜನಿಸಿದರು. ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರು. ಬೆಂಗಳೂರಿನ ಭಾರತೀಯ ಮನೋವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಉಪನ್ಯಾಸಕರಾಗಿ ಮತ್ತು ಸಮಾಲೋಚಕರಾಗಿ ಪ್ರಾರಂಭಿಸಿದರು. ಯುವಜನರ ಸಬಲೀಕರಣ ಕ್ಷೇತ್ರದಲ್ಲಿ ಅತೀವ ಆಸಕ್ತಿ ಇದ್ಯುದು, ಯುವಜನ ಪರ ಹಲವು ಲೇಖನಗಳನ್ನು ಮತ್ತು ಯುವಜನರ ಅಭಿವೃದ್ಧಿಗೆ ಪೂರಕವಾದ ಐದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಯುವಜನ ಕಾರ್ಯ ಮತ್ತು ಸಮುದಾಯಾಭಿವೃದ್ಧಿ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ನಿರಂತರ ಸೇವೆ ಗುರುತಿಸಿ ಬಸವಜ್ಯೋತಿ ರಾಜ್ಯ ಪ್ರಶಸ್ತಿ, ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ, ...
READ MORE