ಪ್ರತಿಯೊಬ್ಬ ವ್ಯಕ್ತಿಗಳಲ್ಲಿ ಹಲವು ಬಗೆಯ ವರ್ತನೆಗಳನ್ನು ಕಾಣಬಹುದು. ಆದರೆ ಈ ಅದು ಕೆಲವೊಮ್ಮೆ ಸಮಸ್ಯಾತ್ಮಕ ವರ್ತನೆಗಳಾಗಿ ಸಹವರ್ತಿಗಳಿಗೆ ಅನಿಸಬಹುದು. ಅಂತಹ ವರ್ತನೆಗಳು ಸಂಬಧಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ನಮ್ಮ ವ್ಯಕ್ತಿತ್ವ, ಸ್ವಭಾವ, ವರ್ತನೆಗಳು ಎಂತಹದ್ದು ಎಂದು ನಮ್ಮನ್ನು ನಾವೇ ಗುರುತಿಸಿ ಕೊಳ್ಳುವಲ್ಲಿ ಈ ಕೃತಿ ಸಹಾಯಕಾರಿ.ಲೇಖಕ ಡಾ. ಮೀಗುಂಡಿ ಸುಬ್ರಮಣ್ಯ ಅವರು ಸರಳವಾಗಿ ವರ್ತನೆಗಳ ಕ್ಲಿಷ್ಟಕರ ಸ್ವರೂಪವನ್ನು ವಿವರಿಸಿ, ಅದರ ನಿವಾರಣೆಯ ಉಪಾಯಗಳನ್ನು ವಿವರಿಸಿದ್ದಾರೆ.
ಸುಬ್ರಹ್ಮಣ್ಯಂ ವೆಂಕಟರಾವ್ ಮೀನಗುಂಡಿ ಮನೋವಿಜ್ಞಾನದ ಲೇಖನ ವಲಯದಲ್ಲಿ ಚಿರಪರಿಚಿತ ಹೆಸರು. (ಜನನ 1943) ಬಳ್ಳಾರಿಯ ತಾರಾನಾಥ ಆಯರ್ವೇದ ವಿದ್ಯಾಪೀಠದಲ್ಲಿ ಎಲ್.ಎ.ಎಂ.ಎಸ್.ಶಿಕ್ಷಣ ಪೂರೈಸಿ, ಸೈಕೋಥೆರಪಿ (1975) ರಂಗ ಪ್ರವೇಶಿಸಿದರು. ನಂತರ, ಕೊಚ್ಚಿನ್'ನ ಇನ್ಸ್ ಸ್ಟಿಟ್ಯೂಟ್ ಫಾರ್ ಕೌನ್ಸೆಲಿಂಗ್ ಆಂಡ್ ಟ್ರ್ಯಾನ್ಸ್ಯಾಕ್ಯನಲ್ ಅನಾಲಿಸಿಸ್ ರೆವರೆಂಡ್ ಫಾದರ್ ಜಾರ್ಜ್ ಕಂಡತಿಲ್ ಎಸ್.ಜೆ. ಮತ್ತು ಸಿಸ್ಟರ್ ಅನ್ನಿ ಮಾರಿಯಾ ಸಿ.ಎಂ. ಅವರಿಂದ ಟ್ರಾನ್ಯಾಕನಲ್ ಅನಾಲಿಸಿಸ್, ಗ್ರೂಪ್ ಡೈನಾಮಿಕ್ಸ್, ಗೆಸ್ಟಾಲ್ಟ್ ಥೆರಪಿ ಮತ್ತು ನಾನ್ ಡೈರೆಕ್ಟಿವ್ ಕೌನ್ಸೆಲಿಂಗ್ ನಲ್ಲಿ ತರಬೇತಿ ಪಡೆದರು. ಮಾನಸಿಕ ವಿಜ್ಞಾನದಲ್ಲಿ ರೋಗ ವಿಶ್ಲೇಷಣೆಯ ಪದ್ಧತಿ ಬೆಳೆದು ಬಂದು, ಹಲವಾರು ಶಿಬಿರಗಳನ್ನು ನಡೆಸಿದರು. ಮೀನಗುಂಡಿಯವರು ಮನಸ್ಸು ಇಲ್ಲದ ...
READ MORE