ಲೇಖಕ ಗೌರೀಶ ಕಾಯ್ಕಿಣಿ ಅವರು ಬರೆದ ಕೃತಿ-ಬಾಳಿನ ಗುಟ್ಟು. ಬಾಳ್ವೆ ಮಾಡಲು ಸಂಸ್ಕಾರ ಬೇಕು. ಇಲ್ಲದಿದ್ದರೆ ಬಾಳ್ವೆ ಹದಗೆಡುತ್ತದೆ. ಜೀವನದ ಅರ್ಥ ತಿಳಿದು ಮತ್ತು ತಿಳಿಯದೇ ಬದುಕುವವರಿಗೂ ಇರುವ ವ್ಯತ್ಯಾಸವೆಂದರೆ -ಅರಿವು. ಈ ತಿಳಿವಳಿಕೆಯು ಬಾಳಿಗೆ ಬೆಳಕು ನೀಡುತ್ತದೆ. ಅಲ್ ಫ್ರೈಡ್ ಎಡ್ಲರ್ ಅವರ ‘ ಸೈನ್ಸ್ ಆಫ್ ಲಿವಿಂಗ್’ ಎಂಬ ಗ್ರಂಥದ ಅನುವಾದವಿದು. ವಿಚಾರಪೂರ್ಣವಾದ ದೀರ್ಘ ಬರೆಹವಿದು. ಅಲ್ ಫ್ರೈಡ್ ಎಡ್ಲರ್ ಹೇಳಿರುವ ಇಲ್ಲಿಯ ಯಾವ ವಿಚಾರಗಳೂ ಹೊಸತಲ್ಲ. ಆದರೆ, ತಿಳಿದೂ ನಾವು ಆಚಾರಿಸಿದ್ದೇವೆಯೇ? ಎಂಬುದು ಪ್ರಶ್ನೆ. ಈ ಹಿನ್ನೆಲೆಯಲ್ಲಿ ಬಾಳಿನ ಗುಟ್ಟು ಅತ್ಯಂತ ಮಹತ್ವದ ಗ್ರಂಥ ಎಂದು ಮುನ್ನುಡಿ ಬರೆದ ಸಂಸ್ಕೃತಿ ಸಂಶೋಧಕ ಶಂ.ಬಾ. ಜೋಶಿ ಅವರು ಪ್ರಶಂಸಿಸಿದ್ದಾರೆ.
©2024 Book Brahma Private Limited.