ಲೇಖಕ ಅಡ್ಡೂರು ಕೃಷ್ಣರಾವ್ ಅವರು ಸದ್ಯ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃಷಿ ಸಂಪದದ ಸಂಪಾದಕರು. ಸಾವಯವ ಕೃಷಿ ಬಳಗದ ಅಧ್ಯಕ್ಷರು. ದಿನಪತ್ರಿಕೆಯ ಅಂಕಣಕಾರರು. ಕೃಷಿ ತರಬೇತುದಾರರು. ಬ್ಯಾಂಕ್ ವ್ಯವಹಾರ ತಜ್ಞರು. ಗ್ರಾಹಕರ ವೇದಿಕೆ ಸಂಚಾಲಕರು.
ಕೃತಿಗಳು: ಮನರಂಜನೆಗಾಗಿ ಬೀಜಗಣಿತ (ಅನುವಾದಿತ ), ಎಂಬತ್ತರ ಕೊಯ್ಲಿನ ಕಾಳುಗಳು : ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ , ಹಸುರು ಹೆಜ್ಜೆ (ಅಂಕಣ ಬರಹ), ಮ್ಯಾನುವಲ್ ಓನ್ ಬ್ಯಾಂಕಿಂಗ್ (ಸಂಪಾದಿತ ಕೃತಿ), ಇಂಗ್ಲಿಷ್ ಮೇಡ್ ಈಸೀ (ಸಂಪಾದಿತ ಕೃತಿ), ಮೋಜಿನ ಗಣಿತ (ಮೂಲ:"ಫಿಗರ್ಸ್ ಫಾರ್ ಫನ್" ಇಂಗ್ಲಿಷ್), ಜನಜಾಗೃತಿಯ ಸಾಧನ: ಮಾಹಿತಿ ಮಂಥನ, ಬಳಕೆದಾರರ ಸಂಗಾತಿ, ಟೂರಿಸ್ಟ್ ಗೈಡ್ - ದಕ್ಷಿಣ ಕನ್ನಡ, ಉಡುಪಿ, ಕೊಡಗು ಕಾಸರಗೋಡು ಜಿಲ್ಲೆಗಳು (ಸಂಪಾದಿತ ಕೃತಿ), ಉತ್ತಮ ಆಳ್ವಿಕೆ: ಪ್ರೇರಕರ ಕೈಪಿಡಿ (ಸಂಪಾದಿತ ಕೃತಿ), ರಾಜನೀತಿಯ ಅಪರಂಜಿ: ಡಾ. ಎ. ಸುಬ್ಬರಾವ್, ಪದ್ಮಭೂಷಣ ಡಾ.ಬಿ.ಎಮ್. ಹೆಗ್ಡೆ, ಮನಸ್ಸಿನ ಮ್ಯಾಜಿಕ್, ವಿಷಮುಕ್ತ ಊಟದ ಬಟ್ಟಲು ಆಂದೋಲನ ಕಥನ, ಚಂದ ಪುಸ್ತಕ (ಚಂದ ಕೈಬರಹ ರೂಪಿಸುವ ಪುಸ್ತಕ),, ಕೃಷಿ ವಿಜ್ನಾನ, ಲಾಲ್ ಬಹದ್ದೂರ್ ಶಾಸ್ತ್ರಿ.