ಷೇಕ್ಸ್ ಪಿಯರ್ ಜಗತ್ಪ್ರಸಿದ್ದ ನಾಟಕಕಾರ, ಸಾಹಿತಿ, ಕವಿ. ಈತನ ಎಲ್ಲ ಬಗೆಯ ಬರಹಗಳ ಅತ್ಯುತ್ತಮ ಭಾಗಗಳನ್ನು ಪ್ರಾತಿನಿಧಿಕವಾಗಿ ಆಯ್ದು ’ಪೇಕ್ಸ್ ಪಿಯರ್ ಕೈಪಿಡಿ’ ಪುಸ್ತಕದ ಮೂಲಕ ಲೇಖಕ, ಕವಿ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ತಂದಿದ್ದಾರೆ.
ಷೇಕ್ಸ್ ಪಿಯರನ ಜೀವನ ಸಂಗತಿಗಳನ್ನು ನಿರೂಪಿಸುವ ಒಂದು ಅಧ್ಯಾಯವೂ, ಹತ್ತರಲ್ಲಿ ಏಳು ದುರಂತ ನಾಟಕಗಳು ಮತ್ತು ,ಮೂರು ಸುಖಾಂತ ನಾಟಕಗಳಿವೆ. ಈ ಪುಸ್ತಕ ಒಟ್ಟಿನಲ್ಲಿ ಷೇಕ್ಸ್ ಪಿಯರನ ರಚನೆಗಳ ಪ್ರಾತಿನಿಧಿಕ ಸಂಗ್ರಹ ಎನ್ನಬಹುದು.
ಷೇಕ್ಸ್ ಪಿಯರನ ಜೀವನ ಚರಿತ್ರೆ, ಕಥನ ಕವನಗಳು, ಸಾನೆಟ್ ಕಾವ್ಯ, ಆಯ್ದ ಮೂವತ್ತೈದು ಸಾನೆಟ್ ಗಳು (ಅಡಿಟಿಪ್ಪಣಿ ಸಹಿತ), ನಾಟಕಗಳು, ಹತ್ತು ಅತ್ಯುತ್ತಮ ನಾಟಕಗಳ ಕಥಾಸಾರ ಹೀಗೆ ಕೆಲವು ಲೇಖನಗಳ ಮೂಲಕ ಷೇಕ್ಸ್ ಪಿಯರನ ಸಾಹಿತ್ಯ ಪರಿಚಯ ಈ ಪುಸ್ತಕದಲ್ಲಿ ಸಾಧ್ಯವಾಗಿದೆ.
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರು. ಮೂಲತಃ ಶಿವಮೊಗ್ಗದವರಾದ ಅವರು ಸದ್ಯ ಬೆಂಗಳೂರು ನಗರದ ನಿವಾಸಿ. ಅವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಅವರ ಪೂರ್ಣ ಹೆಸರು ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ. ಅವರು ಕವಿ ಮಾತ್ರವಲ್ಲದೆ ವಿಮರ್ಶಕ ಹಾಗೂ ವಾಗ್ಮಿ. ಅವರ ಭಾವಗೀತೆಗಳು ಕ್ಯಾಸೆಟ್ಗಳ ಮೂಲಕಜನಪ್ರಿಯಗೊಂಡಿವೆ. ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು, ದೀಪಿಕಾ ಮತ್ತು ಬಾರೋ ವಸಂತ (ಕವನ ಸಂಗ್ರಹಗಳು), ಹೊರಳು ದಾರಿಯಲ್ಲಿ ಕಾವ್ಯ (ವಿಮರ್ಶೆ), ಜಗನ್ನಾಥ ವಿಜಯ, ಮುದ್ರಾ ಮಂಜೂಷ, ಕರ್ಣ, ಕುಂತಿ, ಕನ್ನಡ ...
READ MORE