‘ನೊಬೆಲ್ ಪುರಸ್ಕೃತರು’ ಸಿ. ಆರ್. ಕೃಷ್ಣರಾವ್ ಅವರ ಸಮಗ್ರ ಮಾಹಿತಿ ಕೋಶ ಕೃತಿಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ಪ್ರಪಂಚದಲ್ಲಿ ವ್ಯಕ್ತಿಗಳ ಅಪೂರ್ವ ಸಾಧನೆಗಳಿಗೆಂದು ನೀಡಲಾಗುವ ಪುರಸ್ಕಾರಗಳ ಪೈಕಿ ನೊಬೆಲ್ ಪ್ರಶಸ್ತಿಗೆ ವಿಶೇಷ ಸ್ಥಾನವಿದೆ. ಇದು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. 1901 ರಿಂದ 2007 ರವರೆಗೆ, ಭೌತವಿಜ್ಞಾನ, ರಸಾಯನ ವಿಜ್ಞಾನ, ವೈದ್ಯ ವಿಜ್ಞಾನ, ಸಾಹಿತ್ಯ, ಅರ್ಥಶಾಸ್ತ್ರ ಮತ್ತು ವಿಶ್ವಶಾಂತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸುಮಾರು 774 ಮಂದಿ ಮಹನೀಯರ ಜೀವನ ಮತ್ತು ಸಾಧನೆಗಳನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುವ ಈ ಕೃತಿ ನೊಬೆಲ್ ಪುರಸ್ಕೃತರ ಕುರಿತಾದ ಒಂದು ಮಾಹಿತಿ ಕೋಶ ಎನ್ನಬಹುದು.
ವಿದ್ವಾಂಸ, ಹಿರಿಯ ಪತ್ರಕರ್ತ, ಸಂಘಟಕ, ಲೇಖಕ ಸಿ.ಆರ್. ಕೃಷ್ಣರಾವ್ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು. ನವಕರ್ನಾಟಕದ ವಿವಿಧ ಬೃಹತ್ ಯೋಜನೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿರುತ್ತಾರೆ. 2023 ಸೆಪ್ಟೆಂಬರ್ 10 ನಿಧನ. ಕೃತಿಗಳು: ಸ್ವಾತಂತ್ಯ್ರ ನಂತರದ ಭಾರತ, ನೊಬೆಲ್ ಪುರಸ್ಕೃತರು (ಸಮಗ್ರ ಮಾಹಿತಿ ಕೋಶ), ಕರ್ನಾಟಕ ಕಲಾದರ್ಶನ ಸಂಪುಟ-1, ಬದುಕಿನ ತಿರುವುಗಳು (ಆತ್ಮಕಥೆ), ನವಕರ್ನಾಟಕದ ವಿಜ್ಞಾನ-ತಂತ್ರಜ್ಞಾನ ನಿಘಂಟು -ಇವರ ಸಂಪಾದಿತ ಕೃತಿ. 'ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ – ನಾನು ಕಂಡಂತೆ'.ಇತ್ಯಾದಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ...
READ MORE