ತುರ್ತು ಪರಿಸ್ಥಿತಿಯ ಸಂದರ್ಭಲ್ಲಿ ಜನತಾ ಪಕ್ಷದಲ್ಲಿದ್ದ ಎ.ಕೆ. ಸುಬ್ಬಯ್ಯನವರು ಜೈಲು ಸೇರಿದ್ದರು. ಜನತಾ ಪಕ್ಷ ವಿಭಜನೆಯಾಗಿ ಜನ ಸಂಘ ಹುಟ್ಟಿದಾಗ ಕರ್ನಾಟಕದದಲ್ಲಿ ಅದು ಬೇರೂರುವುಂತೆ ಮಾಡಿದವರು ಸುಬ್ಬಯ್ಯ. ನಂತರ ಜನಸಂಘವು ಬಿಜೆಪಿ ಆದಾಗ ಅದಕ್ಕೆ ನೆಲೆ ಒದಗಿಸುವುದಕ್ಕೆ ಸುಬ್ಬಯ್ಯನವರ ಕೊಡುಗೆ ಅಪಾರ. ಜನಸಂಘ-ಬಿಜೆಪಿಯಲ್ಲಿದ್ದು ಆರ್.ಎಸ್.ಎಸ್ ಒಡನಾಟವನ್ನು ಹತ್ತಿರದಿಂದ ಕಂಡವರು. ಸುಬ್ಬಯ್ಯನವರು ಅರ್.ಎಸ್.ಎಸ್. ಅಂತರಂಗ ಅದರ ಕಾರ್ಯವೈಖರಿ, ಚಿಂತನಾಕ್ರಮ, ಯೋಚನೆ-ಯೋಜನೆಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಬಿಜೆಪಿಯಿಂದ ಹೊರ ಬಂದ ನಂತರ ಪ್ರಕಟವಾದ ಈ ಪುಸ್ತಕ ಚರ್ಚೆಗೆ ಗ್ರಾಸ ಒದಗಿಸಿತ್ತು. ಬಹುಚರ್ಚಿತ ಈ ಕೃತಿ ಮರುಮುದ್ರಣಗೊಂಡಿದೆ. ಈ ಆವೃತ್ತಿಯಲ್ಲಿ ಸಂಘ ಪರಿವಾರವನ್ನು ಟೀಕಿಸುವ ಧಾಟಿಯ ಹಿಂದಿನ ಪುಸ್ತಕದಲ್ಲಿಲ್ಲದ ಲೇಖನಗಳೂ ಸೇರಿವೆ.
ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದ ಎ.ಕೆ. ಸುಬ್ಬಯ್ಯ ಕೊಡಗು ಜಿಲ್ಲೆಯವರು. ತಮ್ಮ ಪ್ರಖರವಾದ ಮಾತುಗಳಿಂದ ಆಡಳಿತಾರೂಢ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸುಬ್ಬಯ್ಯ ಅವರು ಸದಾ ಆಡಳಿತ ಪಕ್ಷದ ವಿರೋಧಿಯಾಗಿಯೇ ಇದ್ದವರು. ಜನಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿರುವ ಸುಬ್ಬಯ್ಯ ಅವರು ಸದ್ಯ ಸೌಹಾರ್ದ-ಸಹಬಾಳ್ವೆಯ ಪರವಾಗಿದ್ದಾರೆ. ಸುಬ್ಬಯ್ಯ ಅವರು ಆರ್.ಎಸ್.ಎಸ್. ಅಂತರಂಗ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ...
READ MORE(ಹೊಸತು, ಜನವರಿ 2014, ಪುಸ್ತಕದ ಪರಿಚಯ)
ಈ ದೇಶವನ್ನು ಹಿಂದೂ ದೇಶವನ್ನಾಗಿಸುವ ಸಂಚು ಹೂಡುವುದು ಮತ್ತು ಕೋಮು ಗಲಭೆ ಎಬ್ಬಿಸಿ ಅನ್ಯ ಧರ್ಮಿಯರನ್ನು ಸದೆಬಡಿಯುವುದು ನಾವಿಂದು ದೇಶದೆಲ್ಲೆಡೆ ಕಾಣುತ್ತಿದ್ದೇವೆ. ಶಾಂತಿ ಕದಡುವ ಕೋಮುವಾದಿ ಸಂಘಟನೆಯೆಂದೇ ಕುಖ್ಯಾತಿ ಪಡೆದಿರುವ ಆರ್.ಎಸ್. ಎಸ್. ಎಂಬ ಗೋಮುಖವ್ಯಾಪದಂತಿರುವ ವಿನಾಶಕಾರಿ ಶಕ್ತಿಯೊಂದರ ಪರಿಚಯ ಇಲ್ಲಿದೆ. ಇದು ಬಹಳ ಹಿಂದಿನಿಂದಲೂ ನಮ್ಮ ದೇಶದಲ್ಲಿ ಬೇರೂರಿ ವಿಷವೃಕ್ಷದಂತೆ ಬೆಳೆದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸಂಕ್ಷಿಪ್ತವಾಗಿ ಆರ್ ಎಸ್ ಎಸ್ ಆಗಿದೆ. ವಿಶ್ವ ಹಿಂದೂ ಪರಿಷತ್, ಜನಸಂಘ, ಸಂಘಪರಿವಾರ, ಭಜರಂಗದಳ, ಜನತಾ ಪಾರ್ಟಿ - ಮುಂದೆ ಇಂದಿನ ಭಾರತೀಯ ಜನತಾ ಪಾರ್ಟಿ ಮುಂತಾಗಿ ಆನೇಕ ಅಪರಾವತಾರಗಳನ್ನು ತಾಳೆ ಗುಪ್ತಗಾಮಿನಿಯಾಗಿ ಯಾವುದಾದರೂ ಪಕ್ಷದ ಮೂಲಕ ಒಳನುಸುಳಿ ಅಧಿಕಾರ ಹಿಡಿಯಲು ಹವಣಿಸಿ ಸೋತಿದೆ. ಆದರೆ ಇಂದಿನ ದಿನಮಾನದಲ್ಲಿ ಕೆಲವೊಂದು ಕಡೆ ಗೆದ್ದೂ ಇದೆ. ಅದು ಗುಜರಾತಿನಲ್ಲಿಂದು ತನ್ನ ನಿಜರೂಪವನ್ನು ತೋರಿಸಿ ಜನತೆಯನ್ನು ಬೆಚ್ಚಿಬೀಳಿಸಿದೆ. ಆರ್.ಎಸ್.ಎಸ್. ಕಾರ್ಯಕರ್ತರ ನಿಜ ಬಣ್ಣವೇನೆಂದು ಇದನ್ನೋದಿದರೆ ತಿಳಿದೀತು, ಕುರಿಗಳ ಹಿಂಡಿನಲ್ಲಿರುವ ತೋಳವನ್ನು ಗುರುತಿಸಬಹುದು... ಆದರೆ ಕುರಿಯ ರೂಪ ಧರಿಸಿದ ತೋಳನನ್ನು ಗುರುತಿಸುವುದು ಅಸಾಧ್ಯ! ಇದು ಮುಖವಾಡದ ಮಹಿಮೆ ಇಂದು ಮತದಾರನಿಗೆ ಯಾರು ಹಿತವರು ತನಗೆ ಎಂಬ ಗೊಂದಲ ಉಂಟಾಗಿದೆ.