ಮೊಗಸಾಲೆ ಎಪ್ಪತ್ತೈದರ ಹೊತ್ತಿಗೆ

Author : ಬಿ. ಜನಾರ್ದನ ಭಟ್

Pages 388

₹ 400.00




Year of Publication: 2019
Published by: ಕನ್ನಡ ಸಂಘ, ಕಾಂತಾವರ
Address: ಉಡುಪಿ
Phone: 9900701666

Synopsys

ಸಾಹಿತಿ ಡಾ.ನಾ. ಮೊಗಸಾಲೆಯವರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ 'ಮೊಗಸಾಲೆ- 75 ಅಭಿನಂದನ ಸಮಿತಿ'ಯು ಮೊಗಸಾಲೆ ಅವರನ್ನು ಹತ್ತಿರದಿಂದ ಬಲ್ಲವರಿಂದ ಬರೆಸಿದ ಲೇಖನಗಳ ಸಂಗ್ರಹವಿದು. ಮೊಗಸಾಲೆ ಅವರು ನಡೆದು ಬಂದ ಹಾದಿ, ಜನರಿಗಾಗಿ ಮಿಡಿದ ಕೈಂಕರ್ಯ, ಸಾಹಿತ್ಯ ಕಾರ್ಯಕ್ರಮಗಳ ಸಚಿತ್ರ ವಿವರ, ಅವರ ಬರಹ, ಬದುಕಿನ ಸಂಗತಿಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Reviews

ಸಾಹಿತಿ ಡಾ.ನಾ. ಮೊಗಸಾಲೆಯವರಿಗೆ 75 ತುಂಬಿದ ಸಂದರ್ಭದಲ್ಲಿ 'ಮೊಗಸಾಲೆ 75 ಅಭಿನಂದನ ಸಮಿತಿ'ಯು ಮೊಗಸಾಲೆಯವರನ್ನು ಹತ್ತಿರದಿಂದ ಬಲ್ಲವರಿಂದ ಬರೆಸಿದ ಲೇಖನಗಳ ಸಂಗ್ರಹವಿದು. ಮೊಗಸಾಲೆ ಸಾಹಿತ್ಯ ವಿಹಾರ ಸರಣಿ ಕಾರ್ಯಕ್ರಮಗಳಲ್ಲಿ ಸಾಹಿತ್ಯ ಚಿಂತಕರು ನೀಡಿದ ಉಪನ್ಯಾಸಗಳನ್ನು ಭಾಗ-1ರಲ್ಲಿ ನುಡಿ ಹೆಜ್ಜೆ ವಿಭಾಗದಲ್ಲಿ, ಮೊಗಸಾಲೆ ಅವರಿಗೆ 75 ವರ್ಷ ತುಂಬಿದಾಗ ಪತ್ರಿಕೆಗಳಲ್ಲಿ ಬಂದ ಅಭಿನಂದನಾ ಬರಹಗಳು ಭಾಗ-2ರ ಸಂಘ ಸಂಗಮದಲ್ಲಿ, ಸಾಹಿತ್ಯ ವಿಹಾರ ಸರಣಿ ಕಾರ್ಯಕ್ರಮದ ಸಚಿತ್ರ ವರದಿಗಳು ಭಾಗ-3 ನಡೆ ಗೆಜ್ಜೆಯಲ್ಲಿ ಹಾಗೂ ಭಾಗ-4ರ ಅನುಬಂಧದಲ್ಲಿ ಕವಿತೆಗಳು ಮತ್ತು ಮೊಗಸಾಲೆ ಬದುಕಿನ ವಿವರಗಳು ಅಡಕವಾಗಿವೆ. ಮೊಗಸಾಲೆಯವರ ಸಾಹಿತ್ಯವನ್ನು ಹೊಸದಾಗಿ ಪ್ರವೇಶಿಸುವವರಿಗೆ ಇದು ದೀವಟಿಗೆಯಂತಿದೆ. ಮೊಗಸಾಲೆಯವರ ಕಾದಂಬರಿಗಳ ಕುರಿತ ಡಾ.ಎಂ.ಎಸ್. ಅಶಾದೇವಿ, ರವಿಶಂಕರ್ ಜೆ.ಕೆ., ಡಾ.ಎಸ್.ಪಿ. ಪದ್ಮಪ್ರಸಾದ್, ಡಾ.ಅರುಣ್ ಕುಮಾರ್, ಎಸ್.ಆರ್. ಬರಹಗಳು ಆಸಕ್ತಿದಾಯಕವಾಗಿವೆ.

ಕೃಪೆ: ಪ್ರಜಾವಾಣಿ, ಮೊದಲ ಓದು (2020 ಜನವರಿ 5)

Related Books