ಸಮಗ್ರ ಮಕ್ಕಳ ಕಾವ್ಯ

Author : ಶಂ.ಗು. ಬಿರಾದಾರ

Pages 144

₹ 80.00




Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಸಮಗ್ರ ಮಕ್ಕಳ ಕಾವ್ಯ ಇದು ಶಂ.ಗು. ಬಿರಾದಾರ ಅವರ ಪ್ರಮುಖ ಕೃತಿ. ಪ್ರಾಚೀನ ಸಾಹಿತ್ಯದಲ್ಲಿ ಮಕ್ಕಳಿಗೆ ಇಷ್ಟವಾಗುವ ಪಂಚತಂತ್ರದ ಅಪಾರ ರಚನೆಗಳು ಇದ್ದರೂ ಕೂಡ , ಆಧುನಿಕ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯ ರಚನೆ ಹೆಚ್ಚು ಪ್ರಮಾಣದಲ್ಲಿ ಕಂಡುಬಂದಿಲ್ಲ. ಈ ನಿಟ್ಟಿನಲ್ಲಿ ಕವಿ . ಶಂ.ಗು. ಬಿರಾದಾರು ಕಳೆದ 50 ವರ್ಷಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಈ ತರದ ಕೆಲಸ ಮಾಡುತ್ತಾ ಬಂದಿದ್ದಾರೆ. ಮಕ್ಕಳ ಮನಸ್ಸುಗಳನ್ನು ಕೇಂದ್ರವಾಗಿಟ್ಟುಕೊಂಡು, ಅವರ ಭಾಷಾ ಪದ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕೃತಿಯನ್ನು ರಚಿಸಿದೆ.

About the Author

ಶಂ.ಗು. ಬಿರಾದಾರ
(17 May 1926)

ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ...ಇಂತಹ ಉತ್ತಮ ಕವಿತೆ ಬರೆದ ಕವಿ ಶಂ.ಗು. ಬಿರಾದಾರ ಜನಿಸಿದ್ದು (17-05-1926) ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಬಲೇಶ್ವರದಲ್ಲಿ.. ತಂದೆ ಗುರುಗೌಡ, ತಾಯಿ ರುದ್ರಾಂಬಿಕಾ. ಪ್ರಾರಂಭಿಕ ಶಿಕ್ಷಣ ಬಬಲೇಶ್ವರದಲ್ಲಿ. ಮುಲ್ಕಿ ಪರೀಕ್ಷೆಯ ನಂತರ ಬಿಜಾಪುರದ ಟ್ರೈನಿಂಗ್‌ ಕಾಲೇಜಿಗೆ ಸೇರಿದರು. ಉಪಾಧ್ಯಾಯರಾಗಿ ವಿವಿಧೆಡೆ ಸೇವೆ ಸಲ್ಲಿಸಿ 1981 ರಲ್ಲಿ ನಿವೃತ್ತರಾದರು. ‘ಬಿಜಾಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ’ದ ಅಧ್ಯಕ್ಷರಾಗಿದ್ದರು.  ಬೆಳಕಿನೆಡೆಗೆ -ಇವರ ಕಾದಂಬರಿ. ಬಸವಶತಕ (ಖಂಡಕಾವ್ಯ), ಭಾವಸಂಗಮ (ಕವನ ಸಂಕಲನ), ಬಬಲೇಶ್ವರ ಬೆಳಕು (ಚರಿತ್ರೆ), ದೇವನೊಡನೆ ಪ್ರಥಮ ರಾತ್ರಿ (ಕಥಾ ಸಂಕಲನ), ಭಯೋತ್ಪಾದಕರು (ಲಲಿತ ಪ್ರಬಂಧಗಳು), ...

READ MORE

Related Books